alex Certify BIG NEWS : ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳನ್ನು ಸಾಮಾಜಿಕ ಪರಿಶೋಧನೆಗೆ ಒಳಪಡಿಸುವಂತೆ ‘ಶಿಕ್ಷಣ ಇಲಾಖೆ’ ಸುತ್ತೋಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳನ್ನು ಸಾಮಾಜಿಕ ಪರಿಶೋಧನೆಗೆ ಒಳಪಡಿಸುವಂತೆ ‘ಶಿಕ್ಷಣ ಇಲಾಖೆ’ ಸುತ್ತೋಲೆ

ಬೆಂಗಳೂರು : ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳನ್ನು ಸಾಮಾಜಿಕ ಪರಿಶೋಧನೆಗೆ ಒಳಪಡಿಸುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಸುತ್ತೋಲೆ ಹೊರಡಿಸಿದೆ.

ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿಯಲ್ಲಿ 2022-23ನೇ ಸಾಲಿನಿಂದ ಪ್ರಾರಂಭಿಸಿ 2027-28ನೇ ಸಾಲಿನವರೆಗೂ ಪ್ರತಿ ವರ್ಷ ಕನಿಷ್ಠ ಶೇ.20ರಷ್ಟು ಸರ್ಕಾರಿ ಶಾಲೆಗಳಲ್ಲಿ (ಕೆ.ಜಿ.ಬಿ.ವಿ, ಕೆ.ಕೆ.ಜಿ.ಬಿ.ವಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಆವಾಸ್ಯ ವಿದ್ಯಾಲಯಗಳು ಮತ್ತು ವಸತಿ ನಿಲಯಗಳು ಸೇರಿ) ಯೋಜನೆವತಿಯಿಂದ ಅನುಷ್ಠಾನಗೊಂಡಿರುವ ಎಲ್ಲಾ ಕಾರ್ಯಕ್ರಮ/ ಚಟುವಟಿಕೆಗಳ ಸಾಮಾಜಿಕ ಪರಿಶೋಧನೆಗೆ ಒಳಪಡಿಸಲು ಶಿಕ್ಷಣ ಮಂತ್ರಾಲಯ ಸೂಚಿಸಿರುತ್ತದೆ.

2022- 23ನೇ ಸಾಲಿನಲ್ಲಿ ಅನುಷ್ಠಾನಗೊಂಡಿರುವ ಕಾರ್ಯಕ್ರಮ/ ಚಟುವಟಿಕೆಗಳನ್ನು 2024-25ನೇ ಸಾಲಿನಲ್ಲಿ ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯದಿಂದ ದಿನಾಂಕ: 08-07-2024ರಿಂದ ಪ್ರಾರಂಭಿಸಲಾಗುತ್ತಿದೆ. ಈ ಬಗ್ಗೆ ಉಲ್ಲೇಖ-2ರ ಜ್ಞಾಪನ ಪತ್ರದಲ್ಲಿ ಈಗಾಗಲೇ ಮಾಹಿತಿಯನ್ನು ನೀಡಲಾಗಿದೆ. ಉಲ್ಲೇಖ-1ರಲ್ಲಿ ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯದವರು ನೀಡಿರುವ ನಮೂನೆಗಳನ್ನು ಮತ್ತು ಪ್ರಸ್ತುತ ವರ್ಷ ಸಾಮಾಜಿಕ ಪರಿಶೋಧನೆ ಕೈಗೊಳ್ಳಬೇಕಾದ ಶಾಲೆಗಳ ಪಟ್ಟಿಯ(ಶೇ.20) ಸಾಫ್ಟ್ ಪ್ರತಿಯನ್ನು ನಿಮ್ಮ ಇ- ಮೇಲ್ ವಿಳಾಸಕ್ಕೆ ಕಳುಹಿಸಿದೆ. ನೀಡಿರುವ ಶಾಲೆಗಳ ಪಟ್ಟಿಯಲ್ಲಿ ಬದಲಾವಣೆ ಅವಶ್ಯವಿದ್ದಲ್ಲಿ ನಿರ್ದೇಶನಾಲಯದವರೊಂದಿಗೆ ಚರ್ಚಿಸಿ ಅದೇ ವಿಧದ(Same Category) ಶಾಲೆಗಳನ್ನು ಬದಲಾಯಿಸಿ ಮಾಹಿತಿಯನ್ನು ಈ ಕಛೇರಿಗೆ ನೀಡುವುದು.
ನಿರ್ದೇಶನಾಲಯದವರು ನೀಡಿರುವ ನಮೂನೆಗಳನ್ನು ಸಂಬಂಧಿಸಿದ ಶಾಲೆಗಳವರು ಪ್ರತಿಗಳನ್ನು ಪಡೆದು ಮಾಹಿತಿಯನ್ನು ಭರ್ತಿ ಮಾಡಿ ಪರಿಶೋಧನಾ ತಂಡ ಶಾಲೆಗೆ ಬಂದಾಗ ನೀಡುವುದು. ಈ ಕಾರ್ಯ ಅತ್ಯಂತ ಮಹತ್ವದ್ದಾಗಿದ್ದು ಜಿಲ್ಲಾ ಹಂತದಲ್ಲಿ ಮತ್ತು ತಾಲ್ಲೂಕು ಹಂತದಲ್ಲಿ ಈ ಕಾರ್ಯವನ್ನು ಸಮನ್ವಯಗೊಳಿಸಲು ಒಬ್ಬ ನೋಡಲ್ ಅಧಿಕಾರಿಯನ್ನು ನಿಯೋಜಿಸುವುದು ಎಂದು ಸುತ್ತೋಲೆ ಹೊರಡಿಸಲಾಗಿದೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...