ಮದುವೆಯಾದ್ಮೇಲೆ ಮಕ್ಕಳನ್ನು ಪಡೆಯುವುದು ಹಿಂದಿನಿಂದಲೂ ನಡೆದು ಬಂದ ಒಂದು ಅಲಿಖಿತ ನಿಯಮ. ಮದುವೆಗಿಂತ ಮೊದಲು ಮಕ್ಕಳನ್ನು ಪಡೆಯುವುದು ನಾಚಿಕೆ ವಿಷ್ಯ, ಅವಮಾನ ಎನ್ನಲಾಗ್ತಿತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ಜನರ ಆಲೋಚನೆ ಬದಲಾಗಿದೆ. ಅಧ್ಯಯನವೊಂದರ ಪ್ರಕಾರ, ಮದುವೆಗೂ ಮುನ್ನ ಶಿಕ್ಷಿತ ಮಹಿಳೆಯರು, ಮಕ್ಕಳನ್ನು ಪಡೆಯುವ ಆಸೆ ಹೊಂದಿದ್ದಾರೆ.
ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಸಮಾಜಶಾಸ್ತ್ರಜ್ಞರು ಈ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಶಿಕ್ಷಿತ ಮಹಿಳೆಯರಲ್ಲಿ ಐತಿಹಾಸಿಕ ಬದಲಾವಣೆ ಕಾಣ್ತಿದೆ. 90ನೇ ಶತಮಾನದಲ್ಲಿ ಕಾಣದ ದೊಡ್ಡ ಬದಲಾವಣೆ 91ನೇ ಶತಮಾನದಲ್ಲಿ ಕಾಣ್ತಿದೆ ಎಂದು ತಜ್ಞರು ಹೇಳಿದ್ದಾರೆ.
ಪದವಿ ಪಡೆದ ಮಹಿಳೆಯರು, ಮೊದಲು ಮಕ್ಕಳನ್ನು ಪಡೆಯಲು ಬಯಸುತ್ತಿದ್ದಾರೆ. ನಂತ್ರ ಮದುವೆಯಾಗಲು ಬಯಸುತ್ತಿದ್ದಾರೆ. ಅಂದ್ರೆ ಮದುವೆಗೂ ಮೊದಲೇ ಮೊದಲ ಮಗು ಪಡೆಯಲು ಅವರು ಬಯಸುತ್ತಿದ್ದಾರಂತೆ.
ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಮಹಿಳೆಯರಲ್ಲಿ ಶೇಕಡಾ 18ರಿಂದ 27ರಷ್ಟು ಮಹಿಳೆಯರು, ಮದುವೆಗೆ ಮೊದಲೇ ಮಕ್ಕಳನ್ನು ಪಡೆದಿದ್ದರು. ಪದವಿ ಪಡೆದು ಕೆಲಸ ಶುರು ಮಾಡಿದ ನಂತ್ರ ಮೊದಲು ಮಕ್ಕಳು. ನಂತ್ರ ಪರಿವಾರಕ್ಕಾಗಿ ಮದುವೆ ಮಾಡಿಕೊಳ್ತಿದ್ದಾರೆಂದು ತಜ್ಞರು ಹೇಳಿದ್ದಾರೆ. ಪದವಿ ಪಡೆದ ಮಹಿಳೆಯರು, ಪದವಿ ಪಡೆಯದ ಮಹಿಳೆಯರಿಗಿಂತ ಹೆಚ್ಚು ಅವಿವಾಹಿತರಾಗಿದ್ದರು.
1996ರಲ್ಲಿ ಮದುವೆಯಾಗದೆ ಮಕ್ಕಳನ್ನು ಪಡೆದ ಮಹಿಳೆಯರ ಸಂಖ್ಯೆ ಶೇಕಡಾ 4ರಷ್ಟಿತ್ತು. 20 ವರ್ಷಗಳ ನಂತ್ರ ಈ ಸಂಖ್ಯೆ ಶೇಕಡಾ 24.5ರಷ್ಟಾಗಿದೆ. ಇದು ದೊಡ್ಡ ಪರಿವರ್ತನೆಯಾಗಿದೆ.