ಬೆಲೆ ಏರಿಕೆಯ ಮಧ್ಯೆ ಗ್ರಾಹಕರಿಗೆ ಸಂತಸದ ಸುದ್ದಿಯೊಂದು ಹೊರ ಬೀಳುತ್ತಿದೆ. ಅಡುಗೆ ತೈಲದ ಬೆಲೆ ಈಗಾಗಲೇ ಒಂದೇ ತಿಂಗಳಲ್ಲಿ 8 ರೂ.ನಿಂದ 10 ರೂ.ವರೆಗೆ ಇಳಿಕೆಯಾಗಿದೆ. ಅಲ್ಲದೇ, ಇದು ಮುಂದಿನ ದಿನಗಳಲ್ಲಿ ಇನ್ನೂ ಕಡಿಮೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಜಾಕತಿಕ ಮಾರುಕಟ್ಟೆಗಳಲ್ಲಿನ ಟ್ರೆಂಡ್ ಹಾಗೂ ತೈಲ ಬೀಜಗಳ ಹೆಚ್ಚಿನ ಉತ್ಪಾದನೆಯಿಂದಾಗಿ ಪ್ರತಿ ಕಜಿಗೆ ಇನ್ನೂ ಮೂರ್ನಾಲ್ಕು ರೂಪಾಯಿ ಕಡಿಮೆಯಾಗಬಹುದು ಎಂದು ಉದ್ಯಮ ಸಂಸ್ಥೆಗಳ ಒಕ್ಕೂಟ(ಎಸ್ ಇ ಎ) ಹೇಳಿದೆ.
ಕೇಂದ್ರ ಸರ್ಕಾರ ಕೂಡ ಖಾದ್ಯ ತೈಲಗಳ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಿದೆ. ದೀಪಾವಳಿಗೂ ಮೊದಲು ಬೆಲೆಗಳನ್ನು ಕಡಿಮೆ ಮಾಡುವಂತೆ ಎಸ್ ಇಎ ತನ್ನ ಸದಸ್ಯರಿಗೆ ಹೇಳಿತ್ತು. ಹೀಗಾಗಿಯೇ ಮಾರುಕಟ್ಟೆಯಲ್ಲಿ ಒಂದೇ ತಿಂಗಳಲ್ಲಿ ಖಾದ್ಯ ತೈಲಗಳ ಬೆಲೆ 8 ರೂ. ನಿಂದ 10ರೂ. ವರೆಗೆ ಕಡಿಮೆಯಾಗಿದೆ. ಗ್ರಾಹಕರು ಇದರ ಲಾಭ ಪಡೆಯುವಂತಾಗಿದೆ. ಮುಂದಿನ ದಿನಗಳಲ್ಲಿ ಅಡುಗೆ ತೈಲದ ಬೆಲೆ ಇನ್ನೂ ಕಡಿಮೆಯಾಗಲಿದೆ.