ಅರುಣ್ ಮಾನವ್ ನಿರ್ದೇಶನದ ಧರ್ಮ ಕೀರ್ತಿರಾಜ್ ಅಭಿನಯದ ‘ಜಾಸ್ತಿ ಪ್ರೀತಿ’ ಚಿತ್ರದ ‘ಎದೆ ಗೂಡಲ್ಲಿ’ ಎಂಬ ಹಾಡನ್ನು ಜಾನಕರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹಾಡಿಗೆ ಬದ್ರಿ ಪ್ರಸಾದ್ ಧ್ವನಿಯಾಗಿದ್ದು, ವಿನೀತ್ ರಾಜ್ ಮೆನನ್ ಸಂಗೀತ ಸಂಯೋಜನೆ ನೀಡಿದ್ದಾರೆ. ನಿರ್ದೇಶಕ ಅರುಣ್ ಮಾನವ್ ಸಾಹಿತ್ಯವಿದೆ.
ಈ ಚಿತ್ರವನ್ನು ಪೂರ್ಣಶ್ರೀ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ಪವಿತ್ರ ನಿರ್ಮಾಣ ಮಾಡಿದ್ದು, ಧರ್ಮ ಕೀರ್ತಿರಾಜ್ ಮತ್ತು ಕೃಷಿ ತಾಪಂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿನೀತ್ ರಾಜ್ ಮೆನನ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಈಗಾಗಲೇ ಈ ಸಿನಿಮಾ ಶೂಟಿಂಗ್ ಬಹುತೇಕ ಕಂಪ್ಲೀಟ್ ಆಗಿದ್ದು, ಇನ್ನೇನು ಶೀಘ್ರದಲ್ಲೇ ತೆರೆ ಮೇಲೆ ಬರಲಿದೆ.