ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 21 ರಂದು ವಿಚಾರಣೆಗೆ ಹಾಜರಾಗಲು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ಜಾರಿ ನಿರ್ದೇಶನಾಲಯ(ಇಡಿ) ಸಮನ್ಸ್ ನೀಡಿದೆ.
ಸೋನಿಯಾ ಗಾಂಧಿ ಅವರಿಗೆ ಜುಲೈ 22 ಕ್ಕೆ ನಾಲ್ಕು ವಾರಗಳ ಕಾಲಾವಕಾಶ ನೀಡಲಾಗಿತ್ತು. ಜೂನ್ ನಲ್ಲಿ ಸಮನ್ಸ್ ಮುಂದೂಡುವಂತೆ ಕೋರಿ ಸೋನಿಯಾ ಗಾಂಧಿಯವರ ಲಿಖಿತ ಮನವಿಯನ್ನು ಇಡಿ ಸ್ವೀಕರಿಸಿತ್ತು. ಸೋನಿಯಾ ಅವರು ಕೋವಿಡ್ -19 ಮತ್ತು ಶ್ವಾಸಕೋಶದ ಸೋಂಕಿನಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳುವವರೆಗೆ ಕೆಲವು ವಾರಗಳ ಕಾಲ ವಿಚಾರಣೆ ಮುಂದೂಡುವಂತೆ ಕೋರಿ ತನಿಖಾ ಸಂಸ್ಥೆಗೆ ಪತ್ರ ಬರೆದಿದ್ದರು. ಜೂನ್ 18 ರಂದು ನವದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.
ಇದಕ್ಕೂ ಮುನ್ನ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ) ಎದುರು ಹಾಜರಾಗುವಂತೆ ಸೋನಿಯಾ ಗಾಂಧಿ ಅವರಿಗೆ ಸೂಚಿಸಲಾಗಿತ್ತು. ಕೊರೋನಾ ಮತ್ತು ಅನಾರೋಗ್ಯದ ಕಾರಣ ಸಮಯ ಕೇಳಿದ್ದರು. ಈಗ ಮತಗ್ತೆ ಹೊಸದಾಗಿ ಸಮನ್ಸ್ ನೀಡಲಾಗಿದೆ.