![](https://kannadadunia.com/wp-content/uploads/2025/02/ed-sheeran.jpg)
ಬೆಂಗಳೂರು: ಖ್ಯಾತ ಗಾಯಕ ಎಡ್ ಶೆರಾನ್ ಸಂಗೀತ ಕಾರ್ಯಕ್ರಮವನ್ನು ಅರ್ಧಕ್ಕೆ ತಡೆದ ಪೊಲೀಸರು ಸ್ಥಳದಿಂದ ತೆರಳುವಂತೆ ಸೂಚಿಸಿದ ಘಟನೆ ಬೆಂಗಳೂರುನ ಚರ್ಚ್ ಸ್ಟ್ರೀಟ್ ನಲ್ಲಿ ನಡೆದಿದೆ.
ಎಡ್ ಶೆರಾನ್ ಗಾಯನ ಕಾರ್ಯಕ್ರಮಕ್ಕೆ ಅನುಮತಿ ಇರಲಿಲ್ಲ. ಹೀಗಾಗಿ ಚರ್ಚ್ ಸ್ಟ್ರೀಟ್ ನ ಫುಟ್ ಪಾತ್ ಮೇಲೆಯೇ ಗಾಯಕರು ತನ್ನ ಗಾಜಾ ಬಜಾನಾ ಆರಂಭಿಸಿದ್ದರು. ಎಡ್ ಶೆರಾನ್ ಹಾಡು ಹೇಳುತ್ತಿದ್ದಂತೆಯೇ ಅಪಾರ ಸಂಖ್ಯೆಯಲ್ಲಿ ಚರ್ಚ್ ಸ್ಟ್ರಿಟ್ ರಸ್ತೆಯಲ್ಲಿ ಜನರು ಸೇರಿದ್ದಾರೆ.
ಅನುಮತಿಯಿಲ್ಲದೇ ಸಂಗೀತ ಕಾರ್ಯಕ್ರಮ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ, ಗಾಯನ ಕಾರ್ಯಕ್ರಮವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಅಲ್ಲದೇ ಗಾಯಕ ಎಡ್ ಶೆರಾನ್ ಅವರನ್ನು ಸ್ಥಳದಿಂದ ಕಳುಹಿಸಿದ್ದಾರೆ.