ರಾಂಚಿ: ಜಾರ್ಖಂಡ್ ನಲ್ಲಿ ಅಮಾನತುಗೊಂಡಿರುವ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಅವರಿಗೆ ಸೇರಿದ 82.77 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಜಾರಿ ನಿರ್ದೇಶನಾಲಯ(ಇಡಿ) ಗುರುವಾರ ತಿಳಿಸಿದೆ.
ಆಸ್ತಿಗಳಲ್ಲಿ ‘ಪಲ್ಸ್ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್’, ಒಂದು ಡಯಾಗ್ನೋಸ್ಟಿಕ್ ಸೆಂಟರ್, ‘ಪಲ್ಸ್ ಡಯಾಗ್ನೋಸ್ಟಿಕ್ ಮತ್ತು ಇಮ್ಯಾಜಿನಿಂಗ್ ಸೆಂಟರ್’ ಮತ್ತು ರಾಂಚಿಯಲ್ಲಿ ಎರಡು ಲ್ಯಾಂಡ್ ಗಳು ಸೇರಿವೆ.
ಜಾರ್ಖಂಡ್ ಪೊಲೀಸರು ಮತ್ತು ವಿಜಿಲೆನ್ಸ್ ಬ್ಯೂರೋ ಜಾರ್ಖಂಡ್ ದಾಖಲಿಸಿರುವ ಅನೇಕ ಎಫ್‌ಐಆರ್‌ಗಳ ಆಧಾರದ ಮೇಲೆ ಇಡಿ ಹಣ ವರ್ಗಾವಣೆ ತನಿಖೆಯನ್ನು ಪ್ರಾರಂಭಿಸಿದೆ.
“ಎಂಎನ್‌ಆರ್‌ಇಜಿಎ ಹಗರಣದಿಂದ ಕಮಿಷನ್ ರೂಪದಲ್ಲಿ ಗಳಿಸಿದ ಅಪರಾಧದ ಆದಾಯವನ್ನು ಪೂಜಾ ಸಿಂಘಾಲ್ ಮತ್ತು ಅವರ ಸಂಬಂಧಿಕರಿಗೆ ಸೇರಿದ ವಿವಿಧ ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಮಾಡಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ತನ್ನ ಅಧಿಕೃತ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ಸಿಂಘಾಲ್ ಗಳಿಸಿದ ಇತರ ಲೆಕ್ಕವಿಲ್ಲದ ಹಣದೊಂದಿಗೆ ಹೇಳಲಾದ ಪಿಒಸಿಯನ್ನು ಬೆರೆಸಲಾಗಿದೆ ಮತ್ತು ಲೇಯರ್ ಮಾಡಲಾಗಿದೆ” ಎಂದು ಇಡಿ ಹೇಳಿದೆ.