ನವದೆಹಲಿ: ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ, EMAAR ಮತ್ತು MGF ಡೆವಲಪ್ಮೆಂಟ್ಸ್ ಲಿಮಿಟೆಡ್ ಸೇರಿದಂತೆ ಇತರ ಆರೋಪಿಗಳನ್ನು ಒಳಗೊಂಡ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ED) 834 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ.
ದೆಹಲಿ, ಗುರುಗ್ರಾಮ್ ನಾದ್ಯಂತ 20 ಹಳ್ಳಿಗಳಲ್ಲಿ ಆಸ್ತಿ ಇದೆ. EMAAR-MGF, ಹೂಡಾ ಮತ್ತು ನಿರ್ದೇಶಕ DTCP ತ್ರಿಲೋಕ್ ಚಂದ್ ಗುಪ್ತಾ ಅವರೊಂದಿಗೆ ಶಾಮೀಲಾಗಿ ಕಡಿಮೆ ಬೆಲೆಗೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತು, ಇದರಿಂದಾಗಿ ಸಾರ್ವಜನಿಕರಿಗೆ ಮತ್ತು ಸರ್ಕಾರಕ್ಕೆ ಗಮನಾರ್ಹ ನಷ್ಟವಾಗಿದೆ ಎಂದು ಆರೋಪಿಸಲಾಗಿದೆ.
ಫೆಡರಲ್ ಏಜೆನ್ಸಿಯು ತಾತ್ಕಾಲಿಕವಾಗಿ ಒಟ್ಟು 401.65479 ಎಕರೆ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ, M/s EMAAR ಇಂಡಿಯಾ ಲಿಮಿಟೆಡ್‌ಗೆ 501.13 ಕೋಟಿ ರೂ. ಮತ್ತು M/s MGF ಡೆವಲಪ್‌ಮೆಂಟ್ಸ್ ಲಿಮಿಟೆಡ್‌ಗೆ 332.69 ಕೋಟಿ ರೂ. ಮೌಲ್ಯ ಹೊಂದಿದೆ. ಈ ಆಸ್ತಿಗಳು ಗುರುಗ್ರಾಮ್ ಜಿಲ್ಲೆಯ 20 ಹಳ್ಳಿಗಳಲ್ಲಿವೆ.