ಕೇಂದ್ರದ ಮಾಜಿ ಸಚಿವ, ಡಿಎಂಕೆ ಸಂಸದ ಎ. ರಾಜಾ ಅವರಿಗೆ ಸಂಬಂಧಿಸಿದ 45 ಎಕರೆ ಭೂಮಿಯನ್ನು ಇಡಿ ಜಪ್ತಿ ಮಾಡಿದೆ.
ತಮಿಳುನಾಡಿನ ಕೊಯಮತ್ತೂರಿನಲ್ಲಿ ಕೇಂದ್ರದ ಮಾಜಿ ಟೆಲಿಕಾಂ ಸಚಿವ ಎ. ರಾಜಾ ಅವರ ಬೇನಾಮಿ ಕಂಪನಿಯ ಹೆಸರಿನಲ್ಲಿದೆ ಎಂದು ಹೇಳಲಾದ ಸುಮಾರು 55 ಕೋಟಿ ರೂ. ಮೌಲ್ಯದ 45 ಎಕರೆ ಭೂಮಿಯನ್ನು ಜಾರಿ ನಿರ್ದೇಶನಾಲಯವು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ.
2004 ರಿಂದ 2007 ರವರೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವರಾಗಿದ್ದ ಅವಧಿಯಲ್ಲಿ ಗುರುಗ್ರಾಮ್ ಮೂಲದ ರಿಯಲ್ ಎಸ್ಟೇಟ್ ಕಂಪನಿಗೆ ಪರಿಸರ ಅನುಮತಿಗಳನ್ನು ನೀಡಿದ್ದರು. ಇದು ದೇಶದ ಅತಿದೊಡ್ಡ ರಿಯಲ್ ಎಸ್ಟೇಟ್ ಕಂಪನಿಗಳಲ್ಲಿ ಒಂದಾಗಿದೆ, ಇದು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಸಹ ಪಟ್ಟಿಯಾಗಿದೆ ಎಂದು ಇಡಿ ಹೇಳಿದೆ.
PMLA ತನಿಖೆಯ ಸಂದರ್ಭದಲ್ಲಿ, 2007 ರಲ್ಲಿ ಇದೇ ಅವಧಿಯಲ್ಲಿ ಪರಿಸರ ಅನುಮತಿಯನ್ನು ನೀಡುವುದಕ್ಕಾಗಿ ರಿಯಲ್ ಎಸ್ಟೇಟ್ ಕಂಪನಿಯು ಎ. ರಾಜಾ ಅವರಿಗೆ ಕಿಕ್‌ಬ್ಯಾಕ್ ನೀಡಿದೆ ಎಂದು ED ಕಂಡುಹಿಡಿದಿದೆ.
ರಾಜಾ ಅವರು 2007 ರಲ್ಲಿ ತಮ್ಮ ಕುಟುಂಬ ಸದಸ್ಯರು ಮತ್ತು ಅವರ ಸ್ನೇಹಿತರ ಹೆಸರಿನಲ್ಲಿ ಕಂಪನಿಯನ್ನು ಸಂಘಟಿಸಿದ್ದಾರೆ. ಈ ಕಂಪನಿಯು ಪ್ರಾರಂಭದಿಂದಲೂ ಯಾವುದೇ ವ್ಯವಹಾರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿಲ್ಲ ಮತ್ತು ಕಂಪನಿಯಲ್ಲಿ ಪಡೆದ ಸಂಪೂರ್ಣ ಹಣ ಕೊಯಮತ್ತೂರು ಜಿಲ್ಲೆಯಲ್ಲಿ ಭೂಮಿ ಸ್ವಾಧೀನಪಡಿಸಿಕೊಳ್ಳಲು ಬಳಸಲಾಗಿದೆ ಎಂದು ಹೇಳಲಾಗಿದೆ.