ನವದೆಹಲಿ: ಆಮ್ ಆದ್ಮಿ ಪಕ್ಷ(ಎಎಪಿ) 2014 ಮತ್ತು 2022 ರ ನಡುವೆ ಒಟ್ಟು 7.08 ಕೋಟಿ ರೂಪಾಯಿ ವಿದೇಶಿ ನಿಧಿಯನ್ನು ಪಡೆದಿದೆ ಎಂದು ಜಾರಿ ನಿರ್ದೇಶನಾಲಯ(ಇಡಿ) ಗೃಹ ಸಚಿವಾಲಯಕ್ಕೆ ವರದಿ ಮಾಡಿದೆ.
ಈ ನಿಧಿಯು ಯುಎಸ್ಎ, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಸೌದಿ ಅರೇಬಿಯಾ, ಯುಎಇ, ಕುವೈತ್ ಮತ್ತು ಒಮಾನ್ ಸೇರಿದಂತೆ ದೇಶಗಳಿಂದ ಬಂದಿದೆ. ವಿದೇಶಿ ಕೊಡುಗೆ ನಿಯಂತ್ರಣ ಕಾಯಿದೆ(ಎಫ್‌ಸಿಆರ್‌ಎ), ಪ್ರಜಾಪ್ರತಿನಿಧಿ ಕಾಯ್ದೆ(ಆರ್‌ಪಿಎ) ಮತ್ತು ಭಾರತೀಯ ದಂಡ ಸಂಹಿತೆ(ಐಪಿಸಿ) ಉಲ್ಲಂಘಿಸಿವೆ ಎಂದು ಹೇಳಲಾಗಿದೆ.
ರಾಜಕೀಯ ಪಕ್ಷಗಳಿಗೆ ವಿದೇಶಿ ನಿಧಿಯ ಮೇಲಿನ ನಿರ್ಬಂಧಗಳನ್ನು ತಪ್ಪಿಸಲು ದಾನಿಗಳ ನೈಜ ಗುರುತನ್ನು AAP ಮರೆಮಾಚಿದೆ ಎಂದು ED ಹೇಳಿಕೊಂಡಿದೆ. ಎಎಪಿಯ ಐಡಿಬಿಐ ಬ್ಯಾಂಕ್ ಖಾತೆ ಮತ್ತು ಶಾಸಕ ದುರ್ಗೇಶ್ ಪಾಠಕ್ ಸೇರಿದಂತೆ ಪಕ್ಷದ ನಾಯಕರ ಖಾತೆಗಳಿಗೆ ಹಣವನ್ನು ನೇರವಾಗಿ ಜಮಾ ಮಾಡಲಾಗಿದೆ.
2016ರಲ್ಲಿ ಕೆನಡಾದಲ್ಲಿ ನಡೆದ ಕಾರ್ಯಕ್ರಮವೊಂದರಿಂದ ದುರ್ಗೇಶ್ ಪಾಠಕ್ ಹಣವನ್ನು ಸಂಗ್ರಹಿಸಿ ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಂಡಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ಪಂಜಾಬ್‌ನ ಫಾಜಿಲ್ಕಾದಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಮಾದಕವಸ್ತು ಕಳ್ಳಸಾಗಣೆ ಪ್ರಕರಣದ ತನಿಖೆಯ ವೇಳೆ ಈ ವಿಷಯ ಬಹಿರಂಗವಾಗಿದೆ. ಎಎಪಿ ಶಾಸಕ ಸುಖಪಾಲ್ ಸಿಂಗ್ ಖೈರಾ ಅವರಿಗೆ ಸಂಬಂಧಿಸಿದ ನಿವೇಶನಗಳ ಹುಡುಕಾಟದ ವೇಳೆ ಎಎಪಿಯ ವಿದೇಶಿ ನಿಧಿಯ ವಿವರವಾದ ದಾಖಲೆಗಳು ಪತ್ತೆಯಾಗಿವೆ.