ಭಾರತೀಯ ರೈಲ್ವೇ ದೇಶದ ಉದ್ದಗಲಕ್ಕೂ ಅತ್ಯುತ್ತಮವಾದ ಜಾಲ ಹೊಂದಿದ್ದು, ವಿವಿಧ ಭೌಗೋಳಿಕ ಪ್ರದೇಶಗಳ ಮೂಲಕ ಹಾದು ಹೋಗುವ ರಮಣೀಯ ಅನುಭವವನ್ನು ಪ್ರಯಾಣಿಕರಿಗೆ ನೀಡುತ್ತದೆ.
ಮಹಾರಾಷ್ಟ್ರದ ರಾನ್ಪತ್ ಜಲಪಾತವನ್ನು ರೈಲೊಂದು ಹಾಯ್ದು ಹೋಗುತ್ತಿರುವ ಚಿತ್ರವೊಂದನ್ನು ರೈಲ್ವೇ ಸಚಿವಾಲಯ ಶೇರ್ ಮಾಡಿದೆ.
“ಭಾವಪರವಶ! ಕೊಂಕಣ ಪ್ರದೇಶದ ರತ್ನಗಿರಿಯ ಉಕ್ಷಿಯಲ್ಲಿ ಹಚ್ಚಹಸಿರು ಮರಗಳ ನಡುವೆ ಧುಮ್ಮಿಕ್ಕುತ್ತಿರುವ ಜಲಪಾತದ ಎದುರು ರೈಲೊಂದು ಹಾಯ್ದು ಹೋಗುತ್ತಿರುವ ನಯನಮನೋಹರ ದೃಶ್ಯ,” ಎಂದು ಸಚಿವಾಲಯದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಲಾಗಿದೆ.
“ರತ್ನಗಿರಿಯ ಉಕ್ಷಿಯ ಬಳಿ ಇರುವ ಜಲಪಾತದ ನಯನಮನೋಹರ ಸೌಂದರ್ಯವನ್ನು ಕಣ್ತುಂಬಿಕೊಳ್ಳಿ! ಪ್ರಕೃತಿಯ ಈ ಅದ್ಭುತವು ಹಚ್ಚಹಸಿರಿನಿಂದ ಸುತ್ತುವರೆದಿದ್ದು, ಟ್ರೆಕ್ಕಿಂಗ್, ಕ್ಯಾಂಪಿಂಗ್ ಹಾಗೂ ಪಿಕ್‌ನಿಕ್‌ಗಳಿಗೆ ಹೇಳಿ ಮಾಡಿಸಿದ ಜಾಗವಾಗಿ,” ಎಂದು ಜಲಶಕ್ತಿ ಸಚಿವಾಲಯ ಟ್ವೀಟ್ ಮಾಡಿದೆ.