alex Certify Economic Survey 2022: ಇಲ್ಲಿದೆ ಸಂಸತ್‌ ನಲ್ಲಿ ಮಂಡನೆಯಾದ ಆರ್ಥಿಕ ಸಮೀಕ್ಷೆ ಮುಖ್ಯಾಂಶಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Economic Survey 2022: ಇಲ್ಲಿದೆ ಸಂಸತ್‌ ನಲ್ಲಿ ಮಂಡನೆಯಾದ ಆರ್ಥಿಕ ಸಮೀಕ್ಷೆ ಮುಖ್ಯಾಂಶಗಳು

ಸಂಸತ್ತಿನಲ್ಲಿ ಬಜೆಟ್​ ಅಧಿವೇಶನ ಆರಂಭವಾಗಿದೆ. ಬಜೆಟ್​ ಅಧಿವೇಶನದಲ್ಲಿ ಮಾತನಾಡಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​​ ಆರ್ಥಿಕ ಸಮೀಕ್ಷೆಯ ವರದಿಯನ್ನು ಪ್ರಸ್ತುತ ಪಡಿಸಿದ್ದಾರೆ. 2022-23ನೇ ಸಾಲಿನ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು 8-8.5 ಪ್ರತಿಶತದಷ್ಟು ಬೆಳವಣಿಗೆ ಕಾಣಬಹುದು ಎಂಬ ನಿರೀಕ್ಷೆಯನ್ನು ಇಟ್ಟುಕೊಳ್ಳಬಹುದಾಗಿದೆ. ಜಿಡಿಪಿ ಬೆಳವಣಿಗೆ ಕೂಡ 9.2 ಪ್ರತಿಶತದವರೆಗೆ ವಿಸ್ತರಿಸಿದೆ ಎಂದು ಅವರು ಹೇಳಿದ್ರು.

2022ನೇ ಹಣಕಾಸು ವರ್ಷದ ಆರ್ಥಿಕ ಸಮೀಕ್ಷೆಯ ವಿವರ ಇಲ್ಲಿದೆ ನೋಡಿ :

ಆರ್ಥಿಕ ಸಮೀಕ್ಷೆಯ ಪ್ರಕಾರ ಕೋವಿಡ್​ ಸಾಂಕ್ರಾಮಿಕದಿಂದಾಗಿ ತೀವ್ರ ಕುಸಿತದಲ್ಲಿದ್ದ ಭಾರತದ ಆರ್ಥಿಕತೆಯು ಈ ವರ್ಷವು ಸುಧಾರಣೆ ಕಾಣುತ್ತದೆ ಎಂದು ಅಂದಾಜಿಸಲಾಗಿದೆ.

2023ನೇ ಸಾಲಿನ ಹಣಕಾಸು ವರ್ಷದಲ್ಲಿ ಲಸಿಕೆಯ ವ್ಯಾಪ್ತಿ, ಪೂರೈಕೆ ಕ್ಷೇತ್ರದಲ್ಲಿ ಸುಧಾರಣೆ ಹಾಗೂ ನಿಯಮಗಳನ್ನು ಸರಾಗಗೊಳಿಸುವುದರಿಂದ ಆರ್ಥಿಕತೆ ಸುಧಾರಿಸಬಹುದು ಎಂದು ನಿರೀಕ್ಷಿಸಲಾಗಿದೆ.

ರಸ್ತೆಗಳು ಮತ್ತು ಹೆದ್ದಾರಿಗಳು, ರೈಲ್ವೆಗಳು ಮತ್ತು ವಸತಿ ಹಾಗೂ ನಗರ ವ್ಯವಹಾರಗಳಂತಹ ಮೂಲ ಸೌಕರ್ಯಗಳ ಮೇಲೆ ಕೇಂದ್ರೀಕರಿಸುವ ಮೂಲಕ ದೇಶದ ಬಂಡವಾಳದ ವೆಚ್ಚವು ಏಪ್ರಿಲ್​ನಿಂದ ನವೆಂಬರ್​ನಲ್ಲಿ ವರ್ಷಕ್ಕೆ 13.5ರಷ್ಟು ಹೆಚ್ಚಾಗಿದೆ ಎಂದು ಈ ಸಮೀಕ್ಷೆ ಹೇಳಿದೆ. 2021-22ನೇ ಸಾಲಿನ ಏಪ್ರಿಲ್​- ನವೆಂಬರ್​ನಲ್ಲಿ 2.41 ಲಕ್ಷ ಕೋಟಿ ಇದ್ದ ಬಂಡವಾಳ ವೆಚ್ಚವು 2.74 ಲಕ್ಷ ಕೋಟಿಗೆ ಏರಿಕೆ ಕಂಡಿದೆ.

ಬ್ಯಾಂಕಿಂಗ್​ ವ್ಯವಸ್ಥೆ ಕೂಡ ಕೊರೊನಾ ಸಾಂಕ್ರಾಮಿಕ ನೀಡಿದ ಆಘಾತವನ್ನು ಪರಿಣಾಮಕಾರಿಯಾಗಿ ಎದುರಿಸಿದೆ.

ಆರ್ಥಿಕ ಸಮೀಕ್ಷೆಯ ಪ್ರಕಾರ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಭಾರತದ ಆರ್ಥಿಕತೆ ಕುಸಿತದ ನಡುವೆಯೂ ಬೇಡಿಕೆ ನಿರ್ವಹಣೆಗಿಂತ ಪೂರೈಕೆ ಬದಿಯು ಹೆಚ್ಚು ಸುಧಾರಣೆ ಕಂಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...