alex Certify 2025 ರ ವೇಳೆಗೆ Ecom Express ನಿಂದ ಶೇ.50 ರಷ್ಟು ಇ-ಬೈಕ್ ಬಳಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2025 ರ ವೇಳೆಗೆ Ecom Express ನಿಂದ ಶೇ.50 ರಷ್ಟು ಇ-ಬೈಕ್ ಬಳಕೆ

ನವದೆಹಲಿ: ಇಕಾಂ ಎಕ್ಸ್ ಪ್ರೆಸ್ ರಾಷ್ಟ್ರ ರಾಜಧಾನಿಯಲ್ಲಿ ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳನ್ನು ಆರಂಭಿಕ ವಿತರಣೆಗಳಿಗೆ ಕಳೆದ ಎರಡು ವರ್ಷಗಳಿಂದ ಬಳಸುತ್ತಿದ್ದು, 2025ರ ವೇಳೆಗೆ ದೇಶಾದ್ಯಂತ ತನ್ನ ವಾಹನಗಳ ಶೇ. 50ರಷ್ಟನ್ನು ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಯಿಸಲು ನಿರ್ಧರಿಸಿದೆ.

ಈ ನಿಟ್ಟಿನಲ್ಲಿ ಅದು ನಡೆಸಿರುವ ಪ್ರಯೋಗ ಯಶಸ್ವಿಯಾಗಿದೆ. ಕಾರ್ಬನ್ ಹೊರಹೊಮ್ಮುವಿಕೆ, ಇಂಧನ ವೆಚ್ಚ ತಗ್ಗಿಸಲು ಕಂಪನಿ ಇಂತಹ ಪರಿಸರಸ್ನೇಹಿ ಮತ್ತು ದೀರ್ಘಾವಧಿ ಪ್ರಯೋಜನಗಳ ಕ್ರಮಕ್ಕೆ ಮುಂದಾಗಿದೆ. ಸುಸ್ಥಿರ ಗ್ರೀನ್ ಲಾಜಿಸ್ಟಿಕ್ಸ್ ಭಾಗವಾಗಿ 2025ರ ವೇಳೆಗೆ ಕೊನೆಯ-ಮೈಲಿಯ ವಿತರಣೆಗೂ ಇ-ಬೈಕ್‌ಗಳನ್ನು ಬಳಸಲಾಗುವುದು,

ನಿಮ್ಮ ಅದೃಷ್ಟ ಬದಲಿಸುತ್ತೆ ಒಂದು ಗ್ಲಾಸ್ ʼಹಾಲುʼ

ಕನಿಷ್ಠ 50 ಶೇಕಡಾ ವಾಹನಗಳನ್ನು ಎಲೆಕ್ಟ್ರಿಕ್‌ಗೆ ಬದಲಾಯಿಸಲಾಗುವುದು. ಇದಕ್ಕಾಗಿ ಅಗತ್ಯವಿರುವ ಚಾರ್ಜಿಂಗ್ ಸೌಲಭ್ಯದಂತಹ ಮೂಲಸೌಕರ್ಯಗಳನ್ನು ಈಗಿನಿಂದಲೇ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಇಕಾಂ ಎಕ್ಸ್ ಪ್ರೆಸ್ ಲಿಮಿಟೆಡ್ ಸಹ-ಸಂಸ್ಥಾಪಕ ಮತ್ತು ಸಿಇಒ ಟಿ.ಎ. ಕೃಷ್ಣನ್ ತಿಳಿಸಿದ್ದಾರೆ. ಜೈಪುರ ಮತ್ತು ಹೈದರಾಬಾದ್‌ಗಳಲ್ಲಿ ಈಗಾಗಲೇ ಇ-ಬೈಕ್‌ಗಳನ್ನು ನಿಯೋಜಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...