ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಮತದಾರರಿಗೆ ಜಾಗೃತಿ ಮೂಡಿಸಲು ಚುನಾವಣಾ ಆಯೋಗಕ್ಕೆ ಬ್ಯಾಂಕುಗಳು ಮತ್ತು ಅಂಚೆ ಕಚೇರಿಗಳು ಕೈಜೋಡಿಸಿವೆ.
ಸೋಮವಾರ ನವದೆಹಲಿಯಲ್ಲಿ ಭಾರತೀಯ ಬ್ಯಾಂಕ್‌ಗಳ ಸಂಘ(IBA) ಮತ್ತು ಅಂಚೆ ಇಲಾಖೆ(DoP)ಯೊಂದಿಗೆ ಮತದಾನದ ಮಹತ್ವ, ಮತದಾರರ ಪ್ರಭಾವ, ಜಾಗೃತಿ ಮೂಡಿಸಲು ಚುನಾವಣಾ ಆಯೋಗವು ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿದೆ.
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತ ಅರುಣ್ ಗೋಯೆಲ್ ಅವರ ಸಮ್ಮುಖದಲ್ಲಿ ಸಹಿ ಹಾಕಲಾಯಿತು. ಈ ಉಪಕ್ರಮದ ಮೂಲಕ, ECI ಸಂದೇಶ ರವಾನೆಯು ದೇಶಾದ್ಯಂತ 1.6 ಲಕ್ಷ ಬ್ಯಾಂಕ್ ಶಾಖೆಗಳು, ಎರಡು ಲಕ್ಷ ಎಟಿಎಂಗಳು ಮತ್ತು 1.55 ಲಕ್ಷ ಅಂಚೆ ಕಚೇರಿಗಳ ಮೂಲಕ ವ್ಯಾಪಕ ಜನರನ್ನು ತಲುಪುತ್ತದೆ.
IBA ಮತ್ತು DoP ಯ ಸದಸ್ಯರು ಮತ್ತು ಅಂಗಸಂಸ್ಥೆಗಳು ತಮ್ಮ ವೆಬ್‌ಸೈಟ್‌ಗಳಲ್ಲಿ ಮತದಾರರ ಶಿಕ್ಷಣ ಸಂದೇಶಗಳನ್ನು ಪ್ರಮುಖವಾಗಿ ಪ್ರದರ್ಶಿಸುತ್ತವೆ. ಚುನಾವಣಾ ಪ್ರಕ್ರಿಯೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನಿರ್ದೇಶಿಸುತ್ತವೆ. ಮತದಾರರ ಶಿಕ್ಷಣದ ವಿಷಯವನ್ನು ಸಾಮಾಜಿಕ ಮಾಧ್ಯಮ ಮತ್ತು ಸದಸ್ಯ ಸಂಸ್ಥೆಗಳ ಗ್ರಾಹಕರ ಸಂಪರ್ಕ ವೇದಿಕೆಗಳು ಸೇರಿದಂತೆ ವಿವಿಧ ಪ್ರಚಾರದ ಚಾನಲ್‌ಗಳ ಮೂಲಕ ಪ್ರಸಾರ ಮಾಡಲಾಗುತ್ತದೆ,
ಸಾರ್ವಜನಿಕರಲ್ಲಿ ವ್ಯಾಪಕ ಜಾಗೃತಿ ಮೂಡಿಸುತ್ತವೆ. IBA ಮತ್ತು DoP ಅಡಿಯಲ್ಲಿರುವ ಎಲ್ಲಾ ಸಂಸ್ಥೆಗಳು ಮತದಾರರ ಶಿಕ್ಷಣಕ್ಕೆ ಸಂಬಂಧಿಸಿದ ಚರ್ಚೆಗಳು ಮತ್ತು ಉಪಕ್ರಮಗಳಲ್ಲಿ ಉದ್ಯೋಗಿಗಳು ಮತ್ತು ಗ್ರಾಹಕರನ್ನು ತೊಡಗಿಸಿಕೊಳ್ಳಲು ಮತದಾರರ ಜಾಗೃತಿ ವೇದಿಕೆಯನ್ನು ಸ್ಥಾಪಿಸುತ್ತವೆ.