‘ಎಕೋಸ್ ಆಫ್ ಲವ್’ ಎಂಬ ಪ್ರೇಮಿಗಳ ಕಿರುಚಿತ್ರ ನಿನ್ನೆ a2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದ್ದು, ನೋಡುಗರ ಮನ ಮುಟ್ಟುವಲ್ಲಿ ಯಶಸ್ವಿಯಾಗಿದೆ. ಶಿವರಾಜ್ ಹೆಚ್ ಆರ್ ಕಥೆ ಬರೆದು ನಿರ್ದೇಶಿಸಿದ್ದು, ರಾಧಾ ಫಿಲಂ ಪ್ರೊಡಕ್ಷನ್ ನಲ್ಲಿ ನಿರ್ಮಾಣ ಮಾಡಲಾಗಿದೆ.
ಈ ಕಿರು ಚಿತ್ರದಲ್ಲಿ ಸಾಯಿ ಹಿಮೇಶ್ ಹಾಗೂ ಸುಶ್ಮಿತಾ ಭಟ್ ಸೇರಿದಂತೆ ಪದ್ಮ ಕಲಾ, ಶ್ರೀಕಂಠನ್, ದಿವ್ಯ, ಜಲಜ ಕುಂದಾಪುರ, ಶ್ರೇಯ ಕೆ ಉಮೇಶ್, ಚಿರಾಗ್ ಮತ್ತು ವಿದ್ಯಾ ಅಭಿನಯಿಸಿದ್ದು, ಕೀರ್ತನ್ ಸಂಗೀತ ಸಂಯೋಜನೆ ನೀಡಿದ್ದಾರೆ.
ಶಿವರಾಜ್ ಹೆಚ್ ಆರ್, ದರ್ಶನ್ ಶಿಂದೆ ಸಂಭಾಷಣೆ, ವಿಕ್ರಂ ನಾಯಕ್ ಮತ್ತು ನಿಖಿಲ್ ಎಂ ಎಲ್ ಸಂಕಲನ, ಮಂಜು ಮಗನೂರು ಛಾಯಾಗ್ರಹಣವಿದೆ.