ನವದೆಹಲಿ: ಆಗಸ್ಟ್ 1 ರಿಂದ ವೋಟರ್ ಐಡಿಯನ್ನು ಆಧಾರ್ ನೊಂದಿಗೆ ಲಿಂಕ್ ಮಾಡಲು ಅಭಿಯಾನ ಪ್ರಾರಂಭಿಸಲು ಭಾರತೀಯ ಚುನಾವಣಾ ಆಯೋಗ ಮುಂದಾಗಿದೆ.
ಆಗಸ್ಟ್ 1 ರಿಂದ ಮತದಾರರ ಗುರುತಿನ ಚೀಟಿಯನ್ನು ಆಧಾರ್ ಕಾರ್ಡ್ ಗಳೊಂದಿಗೆ ಲಿಂಕ್ ಮಾಡುವ ಅಭಿಯಾನವನ್ನು ಆಯೋಗ ಪ್ರಾರಂಭಿಸಲಿದೆ.
ಮತದಾರರ ಗುರುತು ಸ್ಥಾಪಿಸಲು, ಮತದಾರರ ಪಟ್ಟಿಯಲ್ಲಿನ ನಮೂದುಗಳ ದೃಢೀಕರಣ, ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಅಥವಾ ಒಂದೇ ಕ್ಷೇತ್ರದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಒಂದೇ ವ್ಯಕ್ತಿಯ ಹೆಸರನ್ನು ನೋಂದಾಯಿಸಿದ್ದಲ್ಲಿ ಪರಿಶೀಲಿಸಲು ಇದು ಸಹಾಯಕವಾಗಲಿದೆ.
ಮಹಾರಾಷ್ಟ್ರದ ಮುಖ್ಯ ಚುನಾವಣಾ ಅಧಿಕಾರಿ ಶ್ರೀಕಾಂತ್ ದೇಶಪಾಂಡೆ, ಭಾರತೀಯ ಚುನಾವಣಾ ಆಯೋಗ ಮತದಾರರ ಗುರುತಿನ ಚೀಟಿಗಳನ್ನು ಆಧಾರ್ ಜೊತೆಗೆ ಲಿಂಕ್ ಮಾಡುವ ಅಭಿಯಾನವನ್ನು ಆಗಸ್ಟ್ 1 ರಿಂದ ಪ್ರಾರಂಭಿಸುತ್ತದೆ ಎಂದು ಹೇಳಿದ್ದಾರೆ.