alex Certify ಚುನಾವಣೆ ರಣಕಣದಲ್ಲಿ ನಾಲಗೆ ಹರಿಬಿಟ್ಟ ನಾಯಕರಿಗೆ ಆಯೋಗ ಶಾಕ್: ಮಾತಿನಲ್ಲಿ ಸಂಯಮ ಇರಲಿ ಎಂದು ಎಚ್ಚರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚುನಾವಣೆ ರಣಕಣದಲ್ಲಿ ನಾಲಗೆ ಹರಿಬಿಟ್ಟ ನಾಯಕರಿಗೆ ಆಯೋಗ ಶಾಕ್: ಮಾತಿನಲ್ಲಿ ಸಂಯಮ ಇರಲಿ ಎಂದು ಎಚ್ಚರಿಕೆ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ನಾಯಕರ ನಡುವೆ ವಾಕ್ಸಮರ ನಡೆಯುತ್ತಿದ್ದು, ಎಲ್ಲೆ ಮೀರಿದ ಮಾತುಗಳು ಕೇಳಿ ಬರುತ್ತಿವೆ. ಈ ಹಿನ್ನಲೆಯಲ್ಲಿ ಚುನಾವಣಾ ಆಯೋಗದಿಂದ ‘ಸಂಯಮದಿಂದ ವರ್ತಿಸಿ’ ಎಂದು ಪಕ್ಷಗಳ ನಾಯಕರು, ಸ್ಟಾರ್ ಪ್ರಚಾರಕರಿಗೆ ಎಚ್ಚರಿಕೆ ನೀಡಲಾಗಿದೆ.

ರಾಜ್ಯ ಚುನಾವಣೆ ಪ್ರಚಾರದ ಗುಣಮಟ್ಟ ಕುಸಿಯುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಚುನಾವಣಾ ಆಯೋಗ, ಪ್ರಚಾರದ ವೇಳೆ ಸಂಯಮ ವಹಿಸುವಂತೆ ಕರೆ ನೀಡಿದೆ. ರಾಜಕೀಯ ಪಕ್ಷಗಳು ಮತ್ತು ಸ್ಟಾರ್ ಪ್ರಚಾರಕರಿಗೆ ಚುನಾವಣಾ ಆಯೋಗ ಸಲಹೆ ನೀಡಿದ್ದು, ಭಾಷಾ ಪ್ರಯೋಗದ ಮೇಲೆ ಎಚ್ಚರವಿರಬೇಕು. ಚುನಾವಣಾ ವಾತಾವರಣವನ್ನು ಕಲುಷಿತಗೊಳಿಸಬಾರದು. ಮಾದರಿ ನೀತಿ ಸಂಹಿತೆ ಉಲ್ಲಂಘಿಸಬಾರದು. ನಿಂದನಾತ್ಮಕ ಪದ ಬಳಕೆ, ವೈಯಕ್ತಿಕ ತೇಜೋವಧೆ ಮಾಡಬಾರದು. ಪ್ರಚೋದನಕಾರಿ ಕೆರಳಿಸುವ ಹೇಳಿಕೆ ನೀಡಬಾರದು. ರಾಜಕೀಯ ವಿರೋಧಿಗಳ ವಿರುದ್ಧ ಮಾತು ಸಭ್ಯತೆ ಮೀರಬಾರದು. ಬದಲಿಗೆ ವಿಷಯಾಧಾರಿತ ಚರ್ಚೆ ನಡೆಸುವಂತೆ ಸೂಚನೆ ನೀಡಿದೆ. ನೀತಿ ಸಂಹಿತೆ ಉಲ್ಲಂಘಿಸಿದಲ್ಲಿ ಕ್ರಮದ ಎಚ್ಚರಿಕೆ ನೀಡಲಾಗಿದೆ.

ರಾಜಕೀಯ ಪಕ್ಷಗಳು ಮತ್ತು ಅವರ ಸ್ಟಾರ್ ಪ್ರಚಾರಕರಿಗೆ “ತಮ್ಮ ಮಾತಿನಲ್ಲಿ ಎಚ್ಚರಿಕೆ ಮತ್ತು ಸಂಯಮವನ್ನು” ಕಾಯ್ದುಕೊಳ್ಳುವಂತೆ ಚುನಾವಣಾ ಆಯೋಗ ಸಲಹೆ ನೀಡಿದೆ.

ಚುನಾವಣಾ ಆಯೋಗವು ಸಿಇಒಗಳಿಗೆ ಅನುಸರಣೆ ಖಚಿತಪಡಿಸಿಕೊಳ್ಳಲು ಮತ್ತು “ಸೂಕ್ತ ಮತ್ತು ಸಮಯೋಚಿತ ಕ್ರಮ” ಪ್ರಾರಂಭಿಸಲು ನಿರ್ದೇಶಿಸಿದೆ. ಚುನಾವಣಾ ಪ್ರಚಾರದ ನಡುವೆ ನಾಯಕರು ಮಾಡಿದ ವಿವಿಧ ಟೀಕೆಗಳ ವಿರುದ್ಧ ದೂರು ನೀಡಲು ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ನಿಯೋಗಗಳು ಕಳೆದ ಕೆಲವು ದಿನಗಳಲ್ಲಿ ಚುನಾವಣಾ ಆಯೋಗವನ್ನು ಭೇಟಿಯಾಗಿವೆ. ಇದಾದ ನಂತರ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ತಮ್ಮ ಮಾತುಗಳಲ್ಲಿ ಎಚ್ಚರಿಕೆ ಮತ್ತು ಸಂಯಮವನ್ನು ಕಾಯ್ದುಕೊಳ್ಳಲು ಆಯೋಗ ತಿಳಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...