ಹೂಕೋಸು ಭಾರತದ ಬಹುತೇಕ ಕಡೆಗಳಲ್ಲಿ ಎಲ್ಲರೂ ಇಷ್ಟಪಡುವ ತರಕಾರಿ. ವಿವಿಧ ಮೇಲೋಗರಗಳು, ಗೋಬಿ ಮಂಚೂರಿ, ಪಕೋಡ ಹೀಗೆ ಸಾಕಷ್ಟು ವೆರೈಟಿ ತಿನಿಸುಗಳನ್ನು ಹೂಕೋಸಿನಿಂದ ಮಾಡಲಾಗುತ್ತದೆ. ಅತ್ಯಂತ ರುಚಿಕರ ತರಕಾರಿ ಇದು. ಆದ್ರೆ ಅತಿಯಾದ ಎಲೆಕೋಸು ಸೇವನೆ ಕೂಡ ಆರೋಗ್ಯಕ್ಕೆ ಅಪಾಯಕಾರಿ. ಹಿತಮಿತವಾಗಿ ತಿಂದರೆ ಮಾತ್ರ ಹೂಕೋಸಿನ ಪೋಷಕಾಂಶಗಳು ನಮಗೆ ದೊರೆಯುತ್ತವೆ.
ಗ್ಯಾಸ್ಟ್ರಿಕ್: ಹೂಕೋಸಿನಲ್ಲಿ ರಾಫಿನೋಸ್ ಎಂಬ ಅಂಶವಿದೆ. ಇದು ಒಂದು ರೀತಿಯ ಕಾರ್ಬೋಹೈಡ್ರೇಟ್ ಆಗಿದ್ದು, ಸಣ್ಣ ಕರುಳಿನ ಮೂಲಕ ದೊಡ್ಡ ಕರುಳನ್ನು ತಲುಪುತ್ತದೆ, ಇದರಿಂದಾಗಿ ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ಉದ್ಭವಿಸಲು ಪ್ರಾರಂಭಿಸುತ್ತದೆ.
ಥೈರಾಯ್ಡ್ : ಥೈರಾಯ್ಡ್ ಸಮಸ್ಯೆ ಇರುವವರಿಗೆ ಹೂಕೋಸು ಸೇವನೆ ಹಾನಿಕಾರಕ. ಏಕೆಂದರೆ ಇದು T3 ಮತ್ತು T4 ಹಾರ್ಮೋನುಗಳ ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ. ಇದು ಈ ರೋಗಿಗಳಿಗೆ ಒಳ್ಳೆಯದಲ್ಲ.
ರಕ್ತ ದಪ್ಪವಾಗುತ್ತದೆ: ಹೂಕೋಸಿನಲ್ಲಿ ಪೊಟ್ಯಾಸಿಯಂ ಹೆಚ್ಚಿನ ಪ್ರಮಾಣದಲ್ಲಿದೆ. ಇದನ್ನು ಅತಿಯಾಗಿ ಸೇವನೆ ಮಾಡುವುದರಿಂದ ರಕ್ತವು ಕ್ರಮೇಣ ದಪ್ಪವಾಗಲು ಪ್ರಾರಂಭಿಸುತ್ತದೆ. ಹೃದಯಾಘಾತದಿಂದ ಬಳಲುತ್ತಿರುವ ಅನೇಕ ಜನರು ರಕ್ತ ತೆಳುಗೊಳಿಸುವ ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ, ಆದ್ದರಿಂದ ಹೂಕೋಸು ಸೇವನೆಯು ಅವರಿಗೆ ಅಪಾಯಕಾರಿ.