alex Certify ಅತಿಯಾಗಿ ಕ್ಯಾರೆಟ್ ತಿನ್ನುವುದರಿಂದ ಬರಬಹುದು ಗಂಭೀರ ಕಾಯಿಲೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತಿಯಾಗಿ ಕ್ಯಾರೆಟ್ ತಿನ್ನುವುದರಿಂದ ಬರಬಹುದು ಗಂಭೀರ ಕಾಯಿಲೆ…!

ಚಳಿಗಾಲದಲ್ಲಿ ಕ್ಯಾರೆಟ್‌ ಅನ್ನು ಹೆಚ್ಚಾಗಿ ಸೇವಿಸಲಾಗುತ್ತದೆ. ಕ್ಯಾರೆಟ್‌ ಹಲ್ವಾವನ್ನು ಪ್ರತಿ ಮನೆಯಲ್ಲೂ ಮಾಡುವುದು ವಾಡಿಕೆ. ಬೆಳಗಿನ ಉಪಹಾರಕ್ಕೆ ಕ್ಯಾರೆಟ್‌ ಹಲ್ವಾ ಜೊತೆಗೆ ಪರೋಟ ತಿನ್ನುತ್ತಾರೆ.  ಅನೇಕರು ಕ್ಯಾರೆಟ್ ಉಪ್ಪಿನಕಾಯಿಯನ್ನು ಸಹ ಇಷ್ಟಪಡುತ್ತಾರೆ.

ಆದರೆ ಕ್ಯಾರೆಟ್ ಅನ್ನು ಅತಿಯಾಗಿ ತಿನ್ನುವುದು ಹಾನಿಕಾರಕ. ಹೆಚ್ಚು ಕ್ಯಾರೆಟ್ ಸೇವನೆ ಹೊಟ್ಟೆಯ ಸಮಸ್ಯೆಗಳನ್ನು ಉಂಟುಮಾಡಬಹುದು. ಕೆಲವೊಂದು ನಿರ್ದಿಷ್ಟ ಕಾಯಿಲೆಗಳಿಂದ ಬಳಲುತ್ತಿರುವವರು ಕ್ಯಾರೆಟ್ ಅನ್ನು ಮಿತವಾಗಿ ಸೇವಿಸಬೇಕು.

ಬಿಪಿ ಮತ್ತು ಸಕ್ಕರೆ ಕಾಯಿಲೆ ಇರುವವರು ಹೆಚ್ಚು ಕ್ಯಾರೆಟ್ ತಿನ್ನಬಾರದು. ಕ್ಯಾರೆಟ್‌ ತಿಂದರೆ ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚುತ್ತದೆ. ಹಾಗಾಗಿ ಈ ಸಮಸ್ಯೆ ಇರುವವರು ಕ್ಯಾರೆಟ್ ತಿನ್ನುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು. ನ

ನಿದ್ರಾಹೀನತೆ ಅಥಬಾ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರುವವರು ಕೂಡ ಕ್ಯಾರೆಟ್‌ನಿಂದ ದೂರವಿರುವುದು ಉತ್ತಮ. ತಜ್ಞರ ಪ್ರಕಾರ ಕ್ಯಾರೆಟ್ನ ಹಳದಿ ಭಾಗವು ಉಷ್ಣ ಗುಣವನ್ನು ಹೊಂದಿರುತ್ತದೆ. ಇದನ್ನು ಅತಿಯಾಗಿ ತಿಂದರೆ ಹೊಟ್ಟೆಯಲ್ಲಿ ಉಷ್ಣತೆ ಮತ್ತು ಗಂಟಲಿನಲ್ಲಿ ಕಿರಿಕಿರಿ ಉಂಟಾಗುತ್ತದೆ.

ಹೆಚ್ಚು ಕ್ಯಾರೆಟ್ ತಿನ್ನುವುದು ಹಲ್ಲುನೋವಿಗೆ ಕಾರಣವಾಗಬಹುದು. ಕ್ಯಾರೆಟ್‌ನ ಹಳದಿ ಭಾಗವು ಹಲ್ಲುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ದುರ್ಬಲಗೊಳಿಸುತ್ತದೆ. ಆದ್ದರಿಂದ ಹಲ್ಲಿನ ಸಮಸ್ಯೆ ಇರುವವರು ಹೆಚ್ಚು ಕ್ಯಾರೆಟ್ ತಿನ್ನಬಾರದು.

ಕ್ಯಾರೆಟ್‌ನಲ್ಲಿ ಫೈಬರ್‌ ಸಮೃದ್ಧವಾಗಿದೆ. ಪ್ರತಿದಿನ ಕ್ಯಾರೆಟ್ ಅನ್ನು ಸೇವಿಸಿದರೆ ದೇಹದಲ್ಲಿ ಫೈಬರ್ ಮಟ್ಟವು ಹೆಚ್ಚಾಗುತ್ತದೆ. ಇದರಿಂದ ಹೊಟ್ಟೆ ನೋವು ಮತ್ತು ಹೊಟ್ಟೆಗೆ ಸಂಬಂಧಿಸಿದ ಇತರ ಸಮಸ್ಯೆಗಳಾಗುತ್ತವೆ. ಹಾಲುಣಿಸುವ ತಾಯಂದಿರುವ ಕ್ಯಾರೆಟ್‌ ಅನನು ಮಿತವಾಗಿ ಸೇವಿಸಬೇಕು. ಹೆಚ್ಚು ಕ್ಯಾರೆಟ್ ತಿನ್ನುವುದರಿಂದ ಹಾಲಿನ ರುಚಿ ಬದಲಾಗಬಹುದು.

ಕ್ಯಾರೆಟ್‌ನಲ್ಲಿ ಫೈಬರ್ ಜೊತೆಗೆ ಕ್ಯಾರೋಟಿನ್ ಕೂಡ ಬಹಳಷ್ಟು ಇರುತ್ತದೆ. ಇದನ್ನು ಅತಿಯಾಗಿ ಸೇವಿಸುವುದರಿಂದ ತ್ವಚೆಯ ಬಣ್ಣವೂ ಬದಲಾಗಬಹುದು. ದೇಹದಲ್ಲಿ ಕ್ಯಾರೋಟಿನ್ ಪ್ರಮಾಣವನ್ನು ಹೆಚ್ಚಿಸುವುದರಿಂದ ಚರ್ಮದ ಹಳದಿ ಬಣ್ಣವನ್ನು ಹೆಚ್ಚಿಸಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...