ಬಾಳೆಹಣ್ಣು ಪೌಷ್ಠಿಕ ಆಹಾರ. ವಿವಿಧ ಜೀವಸತ್ವಗಳು, ಖನಿಜಗಳನ್ನು ಹೊಂದಿರುವ ಬಾಳೆಹಣ್ಣಿನಲ್ಲಿ ವಿಟಮಿನ್ ಬಿ, ವಿಟಮಿನ್ ಸಿ ಮತ್ತು ಮ್ಯಾಂಗನೀಸ್ ಇದೆ. ಅತಿಯಾದ್ರೆ ಅಮೃತವೂ ವಿಷ ಎನ್ನುವಂತೆ ಅತಿಯಾದ ಬಾಳೆಹಣ್ಣು ಸೇವನೆ ಆರೋಗ್ಯಕ್ಕೆ ಹಾನಿಕರ.
ದಿನಕ್ಕೆ ಒಂದರಿಂದ ಎರಡು ಬಾಳೆಹಣ್ಣು ಸೇವನೆ ಮಾಡುವುದು ಆರೋಗ್ಯಕರ. ಜಿಮ್, ವ್ಯಾಯಾಮ ಮಾಡುವವರು ದಿನಕ್ಕೆ 4-5 ಬಾಳೆ ಹಣ್ಣು ಸೇವನೆ ಮಾಡಬಹುದು. ಆದ್ರೆ ಅದಕ್ಕಿಂತ ಹೆಚ್ಚು ಬಾಳೆಹಣ್ಣು ಸೇವನೆ ಮಾಡುವುದ್ರಿಂದ ಸಮಸ್ಯೆಯುಂಟಾಗುತ್ತದೆ.
ಮಲಬದ್ಧತೆ, ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತದೆ. ಬಾಳೆ ಹಣ್ಣು ಸರಿಯಾಗಿ ಬಲಿಯದೆ ಹೋದಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತದೆ. ತೂಕವನ್ನು ಗಮನದಲ್ಲಿಟ್ಟುಕೊಂಡು ಬಾಳೆಹಣ್ಣು ಸೇವನೆ ಮಾಡಿ. ಬಾಳೆ ಹಣ್ಣಿನಲ್ಲಿ ಕೊಬ್ಬಿನಾಂಶವಿರುತ್ತದೆ. ಇದನ್ನು ಹಾಲಿನ ಜೊತೆ ಸೇವನೆ ಮಾಡಿದ್ರೆ ತೂಕ ಹೆಚ್ಚಾಗುತ್ತದೆ.
ಬಾಳೆ ಹಣ್ಣಿನಲ್ಲಿ ಪಿಷ್ಟವಿದೆ. ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬಾರದು. ಇದು ಜೀರ್ಣಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಕೆಲವರಿಗೆ ಹೊಟ್ಟೆ ನೋವು ಕಾಣಿಸಿಕೊಂಡರೆ ಮತ್ತೆ ಕೆಲವರಿಗೆ ವಾಂತಿ ಬರುತ್ತದೆ.
ಮಧುಮೇಹ ಖಾಯಿಲೆ ಇರುವವರು ಬಾಳೆ ಹಣ್ಣನ್ನು ತಿನ್ನಬಾರದು. ಬಾಳೆ ಹಣ್ಣಿನಲ್ಲಿ ನೈಸರ್ಗಿಕವಾಗಿ ಸಕ್ಕರೆ ಅಂಶವಿರುತ್ತದೆ. ಇದು ದೇಹದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಅಸ್ತಮಾ ಇರುವವರು ಕೂಡ ಕಡಿಮೆ ಪ್ರಮಾಣದಲ್ಲಿ ಬಾಳೆ ಹಣ್ಣು ಸೇವಿಸಬೇಕು.