ನಮ್ಮ ದೇಹ ನಿಂತಿರುವುದೇ ಮೂಳೆಗಳ ಆಧಾರದ ಮೇಲೆ. ಹಾಗಾಗಿ ನಮ್ಮ ಮೂಳೆಗಳು ಗಟ್ಟಿಯಾಗಿದ್ದರೆ ಮಾತ್ರ ದೇಹದ ಬಲ ಹೆಚ್ಚುತ್ತದೆ. ಈ ಕಾರಣಕ್ಕೆ ಮೂಳೆಗಳನ್ನು ಆರೋಗ್ಯವಾಗಿ ನೋಡಿಕೊಳ್ಳಬೇಕು, ಅದಕ್ಕಾಗಿ ನೀವು ಬೆಲ್ಲದ ಜೊತೆ ಹುರಿದ ಕಾಬುಲ್ ಕಡಲೆಯನ್ನು ತಿನ್ನಿ.
ಬೆಲ್ಲ ಮತ್ತು ಕಾಬುಲ್ ಕಡಲೆಯಲ್ಲಿ ಪೋಷಕಾಂಶಗಳು ಸಮೃದ್ಧವಾಗಿವೆ. ಬೆಲ್ಲದಲ್ಲಿ ಕಬ್ಬಿಣಾಂಶ, ಮೆಗ್ನೀಸಿಯಂ, ಪೊಟ್ಯಾಸಿಯಂ, ಸತು ಮತ್ತು ವಿಟಮಿನ್ ಬಿ ಕಾಂಪ್ಲೆಕ್ಸ್ ಕಂಡುಬರುತ್ತದೆ. ಹಾಗೇ ಹುರಿದ ಕಡಲೆಯಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ಫೈಬರ್, ಖನಿಜಗಳು ಮತ್ತು ಪೊಟ್ಯಾಸಿಯಂ ಸಮೃದ್ಧವಾಗಿದೆ.
ಹಾಗಾಗಿ ಇವೆರಡನ್ನು ನಿಯಮಿತವಾಗಿ ಸೇವಿಸಿದರೆ ಸ್ನಾಯುಗಳು ಬಲಗೊಳ್ಳುತ್ತದೆಯಂತೆ. ಹಾಗೇ ಇದು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಬೆಲ್ಲ ಮತ್ತು ಹುರಿದ ಕಡಲೆಯಲ್ಲಿ ಕ್ಯಾಲ್ಸಿಯಂ ಅಂಶ ಸಮೃದ್ಧವಾಗಿದೆ. ಇದು ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು. ಇದನ್ನು ಸೇವಿಸುವುದರಿಂದ ದುರ್ಬಲ ಮೂಳೆಗಳು ಬಲಗೊಳ್ಳುತ್ತದೆಯಂತೆ. ಇದರಿಂದ ಮೂಳೆಗೆ ಸಂಬಂಧಿಸಿದ ಸಮಸ್ಯೆಗಳು ಕಾಡುವುದಿಲ್ಲ.
ಅಲ್ಲದೇ ಇವೆರಡನ್ನು ಸೇವಿಸುವುದರಿಂದ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದರಿಂದ ನೀವು ಪದೇ ಪದೇ ಕಾಯಿಲೆ ಬೀಳುವುದಿಲ್ಲ. ಹಾಗೇ ಇದರಲ್ಲಿ ಫೈಬರ್ ಅಂಶ ಹೆಚ್ಚಾಗಿರುವ ಕಾರಣ ನಿಮ್ಮ ಹೊಟ್ಟೆ ತುಂಬಿರುತ್ತದೆ. ಇದರಿಂದ ಪದೇ ಪದೇ ಹಸಿವಾಗುವುದಿಲ್ಲ. ಅಷ್ಟೇ ಅಲ್ಲದೇ ಇದು ಮೆದುಳಿನ ಆರೋಗ್ಯಕ್ಕೂ ಒಳ್ಳೆಯದು. ಇದು ಮೆಮೊರಿ ಪವರ್ ಅನ್ನು ಹೆಚ್ಚಿಸುತ್ತದೆಯಂತೆ.