ತೂಕ ನಷ್ಟವು ಅತ್ಯಂತ ಸವಾಲಿನ ಕೆಲಸವಾಗಿದೆ. ಕೆಲವರು ತೂಕ ಇಳಿಸಲು ಹಲವು ಮಾರ್ಗಗಳನ್ನು ಅನುಸರಿಸುತ್ತಾರೆ. ಡೆಯೆಟ್, ವ್ಯಾಯಾಮ ಮುಂತಾದ ಹಲವು ಕ್ರಮಗಳನ್ನು ಪಾಲಿಸುತ್ತಾರೆ. ಆದರೆ ನೀವು ತೂಕವನ್ನು ಇಳಿಸಿಕೊಳ್ಳಲು ಬಯಸಿದ್ದರೆ ಸಲಾಡ್ ಅನ್ನು ಈ ರೀತಿಯಲ್ಲಿ ತಯಾರಿಸಿ ಸೇವಿಸಿ.
ತೂಕ ನಷ್ಟಕ್ಕೆ ಹಣ್ಣುಗಳ ಸಲಾಡ್ ತಯಾರಿಸಿ. ಹಣ್ಣುಗಳು ಹೆಚ್ಚಿನ ನೀರಿನಾಂಶವನ್ನು ಹೊಂದಿರುವುದರಿಂದ ಇದು ತ್ವರಿತವಾಗಿ ತೂಕವನ್ನು ಇಳಿಸಲು ಸಹಕಾರಿಯಾಗಿದೆ. ½ ಸೇಬು, ಕಲ್ಲಂಗಡಿ, ಅರ್ಧ ಬಾಳೆಹಣ್ಣು, ಪಪ್ಪಾಯ, 1 ಚಮಚ ಅಗಸೆ ಬೀಜ, 1 ಚಮಚ ಕುಂಬಳಕಾಯಿ ಬೀಜ, 1 ಚಮಚ ಚಿಯಾ ಬೀಜಗಳು ಇವೆಲ್ಲವನ್ನು ಮಿಕ್ಸ್ ಮಾಡಿ ಉಪ್ಪು ಸೇರಿಸಿ ಸಲಾಡ್ ತಯಾರಿಸಿ ಸೇವಿಸಿ.
ತೂಕ ನಷ್ಟಕ್ಕೆ ಪೀನಟ್ ಬಟರ್ ಮತ್ತು ಎಲೆಕೋಸಿನ ಸಲಾಡ್ ಅನ್ನು ತಯಾರಿಸಿ ಸೇವಿಸಿ. ಇವುಗಳು ಕಡಿಮೆ ಕ್ಯಾಲೋರಿಯನ್ನು ಹೊಂದಿದ್ದು, ಇದನ್ನು ಬೆಳಗಿನ ಉಪಹಾರದಲ್ಲಿ ಸೇವಿಸಿ.
ಆವಕಾಡೊ, ಹುರಿದ ಗೋಡಂಬಿ, ಎಲೆಕೋಸು, ತುಳಸಿ ಎಲೆಗಳು, 2 ಚಮಚ ಕಪ್ಪು ಎಳ್ಳು, 2 ಚಮಚ ಪೀನಟ್ ಬಟರ್, 1 ಚಮಚ ಎಳ್ಳೆಣ್ಣೆ, 1 ಚಮಚ ಸೋಯಾ ಸಾಸ್, 1 ಬೆಳ್ಳುಳ್ಳಿ, ಲವಂಗ, 1 ಚಮಚ ಶುಂಠಿ ಪುಡಿ, 2 ಚಮಚ ನೀರು, 1 ಚಮಚ ಜೇನುತುಪ್ಪ ಇವೆಲ್ಲವನ್ನು ಒಟ್ಟು ಸೇರಿಸಿ ಮಿಕ್ಸ್ ಮಾಡಿ ಸೇವಿಸಿ. ಇದು ತೂಕ ನಷ್ಟಕ್ಕೆ ಸಹಕಾರಿಯಾಗಿದೆ.