ಉತ್ತಮ ಆರೋಗ್ಯದ ಜೊತೆ ಉತ್ತಮ ನಿದ್ರೆ ಕೂಡ ಬಹಳ ಮುಖ್ಯ. ತಾವು ಮಲಗುವ ಹಾಸಿಗೆಯನ್ನು ಕೆಲವರು ಸ್ವಚ್ಛವಾಗಿಟ್ಟುಕೊಳ್ತಾರೆ. ಮತ್ತೆ ಕೆಲವರು ತಿಂಗಳುಗಟ್ಟಲೆ ಬೆಡ್ ಶೀಟ್ ಬದಲಿಸುವುದಿಲ್ಲ. ಸ್ವಚ್ಛವಿಲ್ಲದ ಬೆಡ್ ಶೀಟ್ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಸಮೀಕ್ಷೆ ಪ್ರಕಾರ, ಏಕಾಂಗಿಯಾಗಿರುವ ಹಾಗೂ ಸೆಕ್ಸ್ ನಲ್ಲಿ ಸಕ್ರಿಯವಾಗಿರುವ ಪುರುಷ ಸುಮಾರು 15 ದಿನಗಳಾದ್ರೂ ಬೆಡ್ ಶೀಟ್ ಬದಲಾವಣೆ ಮಾಡುವುದಿಲ್ಲವಂತೆ. ಸಂಭೋಗ ನಡೆದ ನಂತ್ರ ಸುಮಾರು 15 ದಿನಗಳ ಕಾಲ ಅದೇ ಬೆಡ್ ಶೀಟ್ ನಲ್ಲಿ ಮಲಗ್ತಾರಂತೆ ಪುರುಷರು.
ಕೆಲವರು ಬೆಡ್ ಮೇಲೆಯೇ ಆಹಾರ ಸೇವನೆ ಮಾಡ್ತಾರಂತೆ. ಧೂಮಪಾನ ಕೂಡ ಮಾಡ್ತಾರಂತೆ. ಆಹಾರ ಸೇವನೆ ಮಾಡಿದ ನಂತ್ರವೂ ಬೆಡ್ ಶೀಟ್ ಬದಲಿಸುವುದಿಲ್ಲ. 15-20 ದಿನಗಳ ಕಾಲ ಬೆಡ್ ಶೀಟ್ ಬದಲಿಸದೆ ಅದೇ ಬೆಡ್ ಶೀಟ್ ನಲ್ಲಿ 8 ಗಂಟೆಗಳ ಕಾಲ ನಿದ್ರೆ ಮಾಡುವವರು ಮನೆಯಲ್ಲಿಯೇ ಅನಾರೋಗ್ಯಕ್ಕೆ ತುತ್ತಾಗುತ್ತಾರಂತೆ.
ರಾತ್ರಿ ಬೆತ್ತಲಾಗಿ ಮಲಗುವ ಜನರು ಕೂಡ 10 ದಿನಗಳವರೆಗೆ ಬೆಡ್ ಶೀಟ್ ಬದಲಿಸುವುದಿಲ್ಲವಂತೆ. ಬೆಡ್ ನಲ್ಲಿರುವ ಬ್ಯಾಕ್ಟೀರಿಯಾ ದೇಹ ಸೇರಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದು ಸಮೀಕ್ಷೆ ಹೇಳಿದೆ. ಸಂಭೋಗದ ನಂತ್ರ ಬೆವರು, ಕೂದಲು, ತಲೆಹೊಟ್ಟು, ವೀರ್ಯ ಹಾಸಿಗೆ ಧೂಳಿಗೆ ಸೇರಿಕೊಳ್ಳುತ್ತದೆ. ಬೆಡ್ ಶೀಟ್ ಬದಲಿಸದೆ ಹೋದ್ರೆ ಬ್ಯಾಕ್ಟೀರಿಯಾ ದೇಹ ಸೇರಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ.