alex Certify ಇವುಗಳನ್ನು ಜೊತೆಯಾಗಿ ತಿಂದ್ರೆ ಅನಾರೋಗ್ಯಕ್ಕೆ ದಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇವುಗಳನ್ನು ಜೊತೆಯಾಗಿ ತಿಂದ್ರೆ ಅನಾರೋಗ್ಯಕ್ಕೆ ದಾರಿ

 

ಟೊಮೆಟೋ ಮತ್ತು ಸೌತೇಕಾಯಿ : ಸಾಮಾನ್ಯವಾಗಿ ಟೊಮೆಟೋ ಮತ್ತು ಸೌತೆಕಾಯಿಯನ್ನು ನಾವು ಒಟ್ಟಿಗೆ ತಿನ್ನುತ್ತೇವೆ. ಆದ್ರೆ ಈ ಎರಡೂ ತರಕಾರಿಗಳು ಜೀರ್ಣವಾಗಲು ವಿಭಿನ್ನ ಸಮಯ ತೆಗೆದುಕೊಳ್ಳುತ್ತವೆ. ಹಾಗಾಗಿ ಇವೆರಡನ್ನೂ ಸೇರಿಸಿ ತಿನ್ನಬೇಡಿ. ಬೇಗನೆ ಜೀರ್ಣವಾಗುವ ಮತ್ತು ತಡವಾಗಿ ಜೀರ್ಣವಾಗುವ ಆಹಾರವನ್ನು ಒಟ್ಟಿಗೆ ಸೇವಿಸುವುದು ಆರೋಗ್ಯಕ್ಕೆ ಮಾರಕ.

 

ಆಲೂಗಡ್ಡೆ ಮತ್ತು ಮಾಂಸ : ಚಿಕನ್ ಬರ್ಗರ್ ಮತ್ತು ಫ್ರೆಂಚ್ ಫ್ರೈಸ್ ಅನ್ನು ಜನ ಇಷ್ಟಪಟ್ಟು ಜೊತೆಯಾಗಿ ಚಪ್ಪರಿಸ್ತಾರೆ. ಮಾಂಸದಲ್ಲಿರೋ ಪ್ರೋಟೀನ್ ಹಾಗೂ ಆಲೂಗಡ್ಡೆಯಲ್ಲಿರುವ ಪಿಷ್ಟ ಮಿಕ್ಸ್ ಆಗುವುದಿಲ್ಲ. ಇವೆರಡು ಪರಸ್ಪರ ಜೀರ್ಣಕ್ರಿಯೆಯನ್ನು ತಡೆಗಟ್ಟುತ್ತವೆ.

 

ಬಿಯರ್ ಮತ್ತು ನಟ್ಸ್ : ಸಾಮಾನ್ಯವಾಗಿ ಎಲ್ಲರೂ ಬಿಯರ್ ತಿನ್ನುತ್ತ ಶೇಂಗಾ ಬೀಜವನ್ನು ಬಾಯಿಗೆ ಹಾಕಿಕೊಳ್ತಾರೆ. ಇವೆರಡೂ ಬೆಸ್ಟ್ ಕಾಂಬಿನೇಶನ್ ಅನ್ನೋದು ಮದ್ಯ ಪ್ರಿಯರ ನಂಬಿಕೆ. ಆದ್ರೆ ಶೇಂಗಾಬೀಜದಲ್ಲಿರುವ ಫ್ಯಾಟ್ ಮತ್ತು ಫೈಬರ್ ಅಲ್ಕೋಹಾಲ್ ಜೊತೆಗೆ ಹೊಂದಾಣಿಕೆಯಾಗುವುದಿಲ್ಲ.

 

ಡೈರಿ ಉತ್ಪನ್ನಗಳು ಮತ್ತು ಅನಾನಸ್ : ಅಪ್ಪಿತಪ್ಪಿಯೂ ಡೈರಿ ಉತ್ಪನ್ನಗಳ ಜೊತೆಗೆ ಅನಾನಸ್ ಸೇರಿಸಿಕೊಂಡು ಸೇವಿಸಬೇಡಿ. ಇದರಿಂದ ಅಜೀರ್ಣ ಉಂಟಾಗುತ್ತದೆ. ಮತ್ತೇರುವ ಸಾಧ್ಯತೆಯೂ ಇರುತ್ತದೆ. ಅನಾಸನ್ ಹುಳಿ ಹಣ್ಣಾಗಿರುವುದರಿಂದ ಜೀರ್ಣ ಕ್ರಿಯೆಯನ್ನು ನಿಧಾನಗೊಳಿಸುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...