ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದರಿಂದ ಜನರು ಬೇಗ ಕಾಯಿಲೆಗೆ ತುತ್ತಾಗುತ್ತಾರೆ. ಆದ ಕಾರಣ ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬೇಕು. ಇದರಿಂದ ಕಾಯಿಲೆಗಳು ನಮ್ಮನ್ನು ಕಾಡುವುದಿಲ್ಲ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇವುಗಳನ್ನು ಸೇವಿಸಿ.
*ಬಾದಾಮಿ : ಬಾದಾಮಿಯಲ್ಲಿ ಮೆಗ್ನೀಶಿಯಂ, ಪ್ರೋಟೀನ್, ಸತು, ವಿಟಮಿನ್ ಇ ಮುಂತಾದ ಪೋಷಕಾಂಶಗಳಿರುತ್ತದೆ. ಇದು ವೈರಸ್ ಮತ್ತು ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಸೋಂಕುಗಳ ವಿರುದ್ಧ ರಕ್ಷಣೆ ನೀಡುತ್ತದೆ.
*ಶುಂಠಿ : ಶುಂಠಿ ಆಂಟಿ ವೈರಸ್, ಆಂಟಿ ಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಶುಂಠಿ ಚಹಾವನ್ನು ಸೇವಿಸುವುದರಿಂದ ರೋಗಗಳಿಂದ ದೂರವಿರಬಹುದು.
*ವಿಟಮಿನ್ ಸಿ : ಕಿತ್ತಳೆ, ನಿಂಬೆ, ಕಿವಿ ಮುಂತಾದ ಹಣ್ಣಿನಲ್ಲಿ ವಿಟಮಿನ್ ಸಿ ಅಧಿಕವಾಗಿರುತ್ತದೆ. ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ನೆಗಡಿಯಿಂದ ನಮ್ಮನ್ನು ಕಾಪಾಡುತ್ತದೆ.