ಮಸಾಲೆ ಬೆರೆಸಿದ ಪದಾರ್ಥಗಳನ್ನು ಸೇವಿಸುವುದರಿಂದ ಹಲವು ಅನಾನುಕೂಲಗಳು ಮಾತ್ರ ಸಂಭವಿಸುತ್ತವೆ ಎಂದು ನೀವು ತಿಳಿದುಕೊಂಡಿದ್ದರೆ ಅದು ನಿಮ್ಮ ತಪ್ಪು. ಖಾರದ ಪದಾರ್ಥಗಳ ಸೇವನೆಯಿಂದ ಹಲವು ಪ್ರಯೋಜನಗಳೂ ಇವೆ.
ಹಸಿರು ಮೆಣಸು. ಕರಿಮೆಣಸು ದಾಲ್ಚಿನಿ ಮೊದಲಾದ ಮಸಾಲೆಗಳು ಹಸಿವನ್ನು ಕಡಿಮೆ ಮಾಡುತ್ತದೆ. ಈ ಮಸಾಲೆ ಬೆರೆಸಿದ ಆಹಾರ ಒಮ್ಮೆ ಸೇವಿಸಿದರೆ ಮತ್ತೆ ಹಸಿವಾಗುವುದೂ ಇಲ್ಲ. ಹಾಗಾಗಿ ತೂಕ ಇಳಿಕೆಗೆ ಇದು ಹೇಳಿ ಮಾಡಿಸಿದ ಆಹಾರ.
ಮೆಣಸಿನಲ್ಲಿರುವ ಅಂಶವೊಂದು ಕ್ಯಾನ್ಸರ್ ಹರಡುವುದನ್ನೂ ತಡೆಯುತ್ತದೆ.
ಜೀರಿಗೆ, ಅರಿಶಿನದಂಥ ಮಸಾಲೆಗಳು ಸೋಂಕಿನಿಂದ ನಿಮ್ಮ ದೇಹವನ್ನು ರಕ್ಷಿಸುತ್ತವೆ. ಇವುಗಳಲ್ಲಿರುವ ಆ್ಯಂಟಿ ಬ್ಯಾಕ್ಟೀರಿಯಾ ಗುಣ ಸೋಂಕು ಮತ್ತು ರೋಗಗಳಿಂದ ನಿಮ್ಮನ್ನು ಕಾಪಾಡುತ್ತವೆ.
ಆದರೆ ಅತಿಯಾದರೆ ಅಜೀರ್ಣ ಎನ್ನುವುದನ್ನು ನೆನಪಿನಲ್ಲಿಟ್ಟುಕೊಂಡು ಖಾರವನ್ನು ಇತಿಮಿತಿಯಲ್ಲಿ ಸೇವಿಸಿದರೆ ಒಳಿತು.