ಅನ್ನ. ಬೇಳೆ ಸಾರು ಪ್ರತಿಯೊಬ್ಬ ಭಾರತೀಯರ ಫೇವರಿಟ್ ಫುಡ್ ಅಂದ್ರೂ ತಪ್ಪಿಲ್ಲ. ಯಾಕಂದ್ರೆ ಪ್ರತಿ ಮನೆಯಲ್ಲೂ ದಿನಕ್ಕೊಮ್ಮೆಯಾದ್ರೂ ದಾಲ್-ಚಾವಲ್ ಸೇವಿಸೋದು ಮಾಮೂಲಿ. ಆದ್ರೀಗ ಎಲ್ಲರಲ್ಲೂ ಬೊಜ್ಜಿನ ಸಮಸ್ಯೆ. ಅನ್ನ ತಿಂದ್ರೆ ತೂಕ ಹೆಚ್ಚಾಗಬಹುದು ಅನ್ನೋ ಆತಂಕ.
ಹಾಗಾಗಿ ಎಷ್ಟೋ ಮಂದಿ ಅನ್ನ ಸೇವನೆಯನ್ನೇ ಬಿಟ್ಟಿದ್ದಾರೆ. ಚಪಾತಿ, ಜೋಳದ ರೊಟ್ಟಿಯ ಮೊರೆಹೋಗ್ತಿದ್ದಾರೆ. ಅಚ್ಚರಿ ಏನ್ ಗೊತ್ತಾ? ನೀವು ರಾತ್ರಿ ಊಟಕ್ಕೆ ಅನ್ನವನ್ನೇ ಸೇವಿಸಬಹುದು. ತೂಕ ಹೆಚ್ಚಾಗುತ್ತೆ ಅನ್ನೋ ಚಿಂತೆ ಬೇಡ. ದಾಲ್-ಚಾವಲ್ ಸೇವಿಸಿದ್ರೆ ತೂಕ ಕಡಿಮೆಯಾಗುತ್ತಂತೆ.
ಹಾಗಂತ ನ್ಯೂಟ್ರಿಶಿಯನ್ ಗಳೇ ಹೇಳ್ತಿದ್ದಾರೆ. ಆದ್ರಿಲ್ಲಿ ಒಂದು ವಿಚಾರ ನಿಮ್ಮ ಗಮನದಲ್ಲಿರಲಿ. ರಾತ್ರಿ 8 ಗಂಟೆಗೂ ಮುನ್ನವೇ ಊಟ ಮಾಡಿ. ಊಟವಾದ ತಕ್ಷಣ ಮಲಗಿಬಿಡಬೇಡಿ. ಊಟ ಮುಗಿಸಿ 2 ಗಂಟೆಗಳು ಕಳೆದ ಬಳಿಕ ನಿದ್ದೆ ಮಾಡುವುದರಿಂದ ತೂಕ ಇಳಿಸಬಹುದು.
ನೀವು ಸೇವಿಸೋ ಬೇಳೆ ಸಾರಿನಲ್ಲಿ ಅರ್ಥಾತ್ ದಾಲ್ ನಲ್ಲಿ ಐರನ್, ಕ್ಯಾಲ್ಶಿಯಂ, ಫೈಬರ್ ಸೇರಿದಂತೆ ಅನೇಕ ಬಗೆಯ ವಿಟಮಿನ್ ಗಳಿವೆ. ಇನ್ನೊಂದ್ಕಡೆ ಅನ್ನ ಕೂಡ ಆರೋಗ್ಯಕ್ಕೆ ಒಳ್ಳೆಯದು. ಹಾಗಾಗಿ ಇವೆರಡರ ಕಾಂಬಿನೇಶನ್, ತೂಕ ಇಳಿಕೆಗೆ ಸಹಕಾರಿ ಎನ್ನುತ್ತಾರೆ ತಜ್ಞರು. ಆದ್ರೆ ಪತ್ರಿನಿತ್ಯ ಕನಿಷ್ಟ 45 ನಿಮಿಷಗಳ ಕಾಲ ವ್ಯಾಯಾಮ ಮಾಡೋದನ್ನು ಮರೆಯಬೇಡಿ.