ಕೆಲವು ಖಾದ್ಯಗಳನ್ನು ತಯಾರಿಸುವಾಗ ಆಲೂಗಡ್ಡೆಯ ಸಿಪ್ಪೆ ತೆಗೆಯುವುದು ಅನಿವಾರ್ಯ. ಹಾಗೆಂದು ಪ್ರತಿಬಾರಿಯೂ ಅದನ್ನೇ ರೂಢಿಸಿಕೊಳ್ಳದಿರಿ. ಆಲೂಗಡ್ಡೆ ಸಿಪ್ಪೆಯಲ್ಲೂ ಸಾಕಷ್ಟು ಪೋಷಕಾಂಶಗಳಿವೆ ಎಂಬುದು ನಿಮಗೆ ತಿಳಿದಿರಲಿ.
ಆಲೂಗಡ್ಡೆಯ ಸಿಹಿಯನ್ನು ನಿಯಂತ್ರಿಸಿ ಮಧುಮೇಹಿಗಳಿಗೆ ಇದರ ಸೇವನೆಯಿಂದ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ವಿಶೇಷ ಗುಣ ಆಲೂಗಡ್ಡೆಗಿದೆ. ಇದನ್ನು ಸಿಪ್ಪೆ ಸಮೇತ ಸೇವಿಸಿದರೆ ನಿಮ್ಮ ದೇಹಕ್ಕೆ ಹೆಚ್ಚುವರಿ ಫೈಬರ್ ದೊರೆಯುತ್ತದೆ. ಸಕ್ಕರೆ ಮಟ್ಟವೂ ನಿಯಂತ್ರಣದಲ್ಲಿ ಇರುತ್ತದೆ.
ಇದು ಪೊಟ್ಯಾಶಿಯಂನ ಆಗರವಾಗಿದ್ದು ರಕ್ತದೊತ್ತಡವನ್ನು ನಿಯಂತ್ರಿಸಲು ನೆರವಾಗುತ್ತದೆ. ಹಾಗಾಗಿ ಬಿಪಿ ಸಮಸ್ಯೆ ಇರುವವರು ಇದನ್ನು ಸಿಪ್ಪೆ ಸಮೇತ ಸೇವಿಸುವುದು ಬಹಳ ಒಳ್ಳೆಯದು.
ರಕ್ತಹೀನತೆ ಹಾಗೂ ಕಬ್ಬಿಣಾಂಶದ ಕೊರತೆ ಇರುವವರು ಇದನ್ನು ವಾರದಲ್ಲಿ ಎರಡರಿಂದ ಮೂರು ಬಾರಿ ಸೇವಿಸುವುದು ಒಳ್ಳೆಯದು. ಇದರಿಂದ ಕೆಂಪು ರಕ್ತ ಕಣಗಳು ಹೆಚ್ಚಿ ಅವುಗಳ ಕಾರ್ಯವೈಖರಿಯೂ ಸುಧಾರಿಸುತ್ತದೆ. ಮಲಬದ್ಧತೆ ಸಮಸ್ಯೆ ಇರುವವರು ಇದನ್ನು ತಿಂದರೆ ಅವರ ಸಮಸ್ಯೆ ದೂರವಾಗುತ್ತದೆ.