ಇತ್ತೀಚಿನ ದಿನಗಳಲ್ಲಿ ಎಲ್ಲರೂ ಲಘು ಉಪಹಾರವನ್ನು ಸೇವಿಸಲು ಇಷ್ಟಪಡುತ್ತಾರೆ. ಕೆಲವೊಮ್ಮೆ ಚಹಾ-ಟೋಸ್ಟ್, ಬ್ರೆಡ್-ಬಟರ್, ಹಣ್ಣುಗಳು, ಜ್ಯೂಸ್ ಹೀಗೆ ಸರಳ ಆಹಾರವನ್ನೇ ತೆಗೆದುಕೊಳ್ತಾರೆ. ಕೆಲವರು ಬ್ರೆಡ್ ಜೊತೆಗೆ ಪೀನಟ್ ಬಟರ್ ತಿನ್ನುವ ಅಭ್ಯಾಸ ಹೊಂದಿದ್ದಾರೆ. ಎಷ್ಟೋ ಜನರಿಗೆ ಪೀನಟ್ ಬಟರ್ ಪ್ರಯೋಜನಗಳ ಬಗ್ಗೆ ತಿಳಿದಿಲ್ಲ. ಇದನ್ನು ಸೂಪರ್‌ಫುಡ್ ಎಂದೂ ಕರೆಯುತ್ತಾರೆ. ಬಹಳಷ್ಟು ಫೈಬರ್ ಮತ್ತು ಪ್ರೋಟೀನ್ ಪೀನಟ್ ಬಟರ್‌ನಲ್ಲಿರುತ್ತದೆ. ಕಡೆಲೆಕಾಯಿ ಬೀಜಗಳು ಹೆಚ್ಚಿನ ಮೊನೊಸಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತವೆ. ಉತ್ತಮ ಪ್ರಮಾಣದ ಕಬ್ಬಿಣ, ಸತು, ಜೀವಸತ್ವಗಳು ಮತ್ತು ಪೊಟ್ಯಾಸಿಯಮ್ ಪೀನಟ್ ಬಟರ್‌ನಲ್ಲಿದೆ. ಇದನ್ನು ಸೇವಿಸುವ ಮೂಲಕ ತೂಕವನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು.
ಹಸಿವನ್ನು ನಿಯಂತ್ರಿಸುತ್ತದೆ
ತಿಂಡಿ ಅಥವಾ ಊಟ ತಿಂದು ಸ್ವಲ್ಪ ಹೊತ್ತಿನಲ್ಲೇ ನಮಗೆ ಹಸಿವಾಗುತ್ತದೆ. ಬೇರೆ ಏನನ್ನಾದರೂ ತಿನ್ನೋಣ ಎಂಬ ಆಸೆಯಾಗುತ್ತದೆ. ಆದರೆ ಪೀನಟ್ ಬಟರ್ ಸೇವಿಸಿದ ನಂತರ ಬೇಗನೆ ಹಸಿವಾಗುವುದಿಲ್ಲ, ಇದು ನಮಗೆ ಹೆಚ್ಚು ತೃಪ್ತಿ ನೀಡುತ್ತದೆ. ಹೆಚ್ಹೆಚ್ಚು ತಿನ್ನುವುದನ್ನು ನಿಯಂತ್ರಿಸುತ್ತದೆ, ಇದರ ಪೌಷ್ಟಿಕಾಂಶಗಳು ದೇಹಕ್ಕೆ ಸಂಪೂರ್ಣ ಆಹಾರವನ್ನು ನೀಡುತ್ತವೆ.
ತೂಕ ಇಳಿಕೆ
ಪೀನಟ್ ಬಟರ್‌ನಲ್ಲಿ ಪ್ರೋಟೀನ್, ಫೈಬರ್, ಜೀವಸತ್ವಗಳು ಮುಂತಾದ ಅನೇಕ ಪೋಷಕಾಂಶಗಳಿವೆ. ಅದನ್ನು ಸೇವಿಸಿದ ನಂತರ ದೀರ್ಘಕಾಲದವರೆಗೆ ಹಸಿವು ಇರುವುದಿಲ್ಲ. ಫೈಬರ್ ಮತ್ತು ಫೋಲೇಟ್ ಅಂಶಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ವ್ಯಾಯಾಮ ಮತ್ತು ಜಿಮ್ ನಂತರವೂ ನೀವು ಇದನ್ನು ತಿನ್ನಬಹುದು. ಇದರಲ್ಲಿ ಫೈಬರ್ ಇರುವುದರಿಂದ ಜೀರ್ಣಕ್ರಿಯೆಯನ್ನು ಬಲಪಡಿಸುತ್ತದೆ.
ಕಣ್ಣುಗಳಿಗೆ ಪ್ರಯೋಜನಕಾರಿ
ಪೀನಟ್ ಬಟರ್ ಸೇವನೆ ಕಣ್ಣುಗಳಿಗೆ ಪ್ರಯೋಜನಕಾರಿ. ಅನೇಕ ಬಾರಿ ನಮ್ಮ ಕಣ್ಣುಗಳು ಭಾರವಾದಂತೆ ಅನಿಸುತ್ತದೆ. ಅವು ಸುಸ್ತಾಗಿರುವುದೇ ಇದಕ್ಕೆ ಮುಖ್ಯ ಕಾರಣ. ಅಂತಹ ಪರಿಸ್ಥಿತಿಯಲ್ಲಿ ಪೀನಟ್ ಬಟರ್ ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿ ವಿಟಮಿನ್-ಎ ಇದ್ದು, ಕಣ್ಣುಗಳಿಗೆ ಇದು ಒಳ್ಳೆಯದು.ಸಕ್ಕರೆ ನಿಯಂತ್ರಣ ಪೀನಟ್ ಬಟರ್ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುವ ಸಂಸ್ಕರಿತ ಆಹಾರ. ಹಾಗಾಗಿ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ. ಮಧುಮೇಹ, ಹೃದ್ರೋಗ, ರಕ್ತದೊತ್ತಡ ಇತ್ಯಾದಿ ಯಾವುದೇ ಸಮಸ್ಯೆಯನ್ನು ಉಂಟುಮಾಡುವುದಿಲ್ಲ.