ಮಾಂಸ ಹೆಚ್ಚಿರುವ ಪಥ್ಯಗಳಿಂದ ದೇಹಕ್ಕೆ ಲಾಭ ಎನ್ನುವುದಕ್ಕಿಂತಲೂ ಹಸಿರುಮನೆ ಅನಿಲಗಳ ಹೊರಸೂಸುವಿಕೆ ಅಧಿಕವಾಗಲು ಕಾರಣವಾಗುತ್ತದೆ ಎಂದು ಲೀಡ್ಸ್ ವಿವಿಯ ಅಧ್ಯಯನವೊಂದು ತಿಳಿಸುತ್ತಿದೆ.
ಕೆಂಪು ಮಾಂಸ ಪ್ರಧಾನವಾದ ಪಥ್ಯಕ್ಕಿಂತಲೂ ಸಮತೋಲಿತ ಪಥ್ಯಕ್ಕೆ ಇರುವ ಇತರೆ ಆಯ್ಕೆಗಳಿಗಿಂತಲೂ 41%ನಷ್ಟು ಅಧಿಕವಾಗಿ ಹಸಿರುಮನೆ ಅನಿಲಗಳ ಹೊರಸೂಸುವಿಕೆಗೆ ಕಾರಣ ಎಂದು ಈ ಅಧ್ಯಯನ ವರದಿ ತಿಳಿಸುತ್ತಿದೆ.
3000ಕ್ಕೂ ಅಧಿಕ ಬಗೆಯ ಆಹಾರಗಳ ಸಂಸ್ಕರಣೆಯ ಕುರಿತು ಅಧ್ಯಯನ ಮಾಡಿದ ತಂಡವು ಮಾಂಸದ ಸಂಸ್ಕರಣೆಯಿಂದಲೇ ಹೆಚ್ಚಿನ ಪ್ರಮಾಣದಲ್ಲಿ ವಾತಾವರಣದ ಮೇಲೆ ಪರಿಣಾಮವಾಗುತ್ತಿದೆ ಎಂದಿದೆ.
ಪತ್ನಿಯ ಜನ್ಮದಿನ ಮರೆತ್ರೆ ಈ ದೇಶದಲ್ಲಿ ಜೈಲೂಟ ಫಿಕ್ಸ್…..?
ಸುಮಾರು 200 ಮಂದಿಯ ಆಹಾರ ಕ್ರಮಗಳ ಬಗ್ಗೆ ಅಧ್ಯಯನ ನಡೆಸಿದ ತಜ್ಞರು, ಮಾಂಸಾಹಾರಿಗಳು ಸಸ್ಯಹಾರಿಗಳಿಗಿಂತಲೂ 59%ನಷ್ಟು ಅಧಿಕವಾಗಿ ಹಸಿರುಮನೆ ಅನಿಲಗಳ ಹೊರಸೂಸುವಿಕೆಗೆ ಕಾರಣರಾಗುತ್ತಾರೆ ಎಂದಿದ್ದಾರೆ.
“ಭೂಮಂಡಲದ ಉಳಿವಿಗೆ ಏನಾದರೂ ಸಣ್ಣಪುಟ್ಟದ್ದನ್ನು ಮಾಡಬೇಕು ಎಂದು ನಾವೆಲ್ಲಾ ಬಯಸುತ್ತೇವೆ. ಪಥ್ಯ ಕ್ರಮಗಳಲ್ಲಿ ಸಣ್ಣ ಪುಟ್ಟ ಬದಲಾವಣೆಗಳಾಗಿ; ಬ್ರಾಂಡ್‌ಗಳ ಬದಲಾವಣೆ, ಸಿಹಿ ತಿನಿಸುಗಳ ಕಡಿಮೆ ಸೇವನೆ, ಇತ್ಯಾದಿಗಳಂಥ ಕೆಲಸಗಳಿಂದ ದೊಡ್ಡ ಪ್ರಯೋಜನಗಳನ್ನು ಪಡೆಯಬಹುದು ಎಂದು ನಮ್ಮ ಅಧ್ಯಯನ ತೋರುತ್ತದೆ,” ಎಂದು ಅಧ್ಯಯನದ ಮುಂಚೂಣಿ ಲೇಖಕ ಡಾ. ಹೋಲಿ ರಿಪ್ಪಿನ್ ತಿಳಿಸಿದ್ದಾರೆ.