ಶುಂಠಿ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಶುಂಠಿ ಸೇವನೆ ಆರೋಗ್ಯಕ್ಕೆ ಅದ್ಭುತ ಪ್ರಯೋಜನ ನೀಡುತ್ತದೆ. ಆದರೆ ಆದರೆ ಬೇಸಿಗೆಯಲ್ಲಿ ಶುಂಠಿ ತಿನ್ನುವುದು ಅಪಾಯ ತಂದೊಡ್ಡಬಹುದು. ಶುಂಠಿಯ ಅತಿಯಾದ ಬಳಕೆ ಕೂಡ ಹಾನಿಕಾರಕ.
ಬೇಸಿಗೆಯಲ್ಲಿ ಶುಂಠಿಯನ್ನು ಅತಿಯಾಗಿ ಸೇವಿಸುವುದರಿಂದ ಮಲಬದ್ಧತೆ ಉಂಟಾಗುತ್ತದೆ. ಹೊಟ್ಟೆಯಲ್ಲಿ ಆಮ್ಲದ ಶೇಖರಣೆಯಾಗಬಹುದು. ಇದು ಅಧಿಕ ಬಿಪಿ ಸಮಸ್ಯೆಗೆ ಕೂಡ ಕಾರಣವಾಗಬಹುದು.
ಶುಂಠಿಯು ಆಮ್ಲೀಯ ಗುಣವನ್ನು ಹೊಂದಿದೆ. ಇದನ್ನು ಅತಿಯಾಗಿ ಸೇವಿಸುವುದರಿಂದ ಎದೆಯುರಿ ಸಾಮಾನ್ಯ. ಈ ಕಾರಣಕ್ಕಾಗಿ ಹೆಚ್ಚು ಶುಂಠಿ ತಿನ್ನುವುದು ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ, ಆದರೆ ಇದು ಹೈಪೊಗ್ಲಿಸಿಮಿಯಾಕ್ಕೆ ಸಹ ಕಾರಣವಾಗಬಹುದು.
ಇದಲ್ಲದೆ ಗರ್ಭಾವಸ್ಥೆಯಲ್ಲಿ ಹೆಚ್ಚು ಶುಂಠಿ ತಿನ್ನಬಾರದು. ಇದರಿಂದ ಹೊಟ್ಟೆ ನೋವು ಬರುವ ಸಾಧ್ಯತೆ ಇರುತ್ತದೆ. ನಿಮ್ಮ ಜೀರ್ಣಾಂಗ ವ್ಯವಸ್ಥೆಯು ದುರ್ಬಲವಾಗಿದ್ದರೆ, ಇಡೀ ದಿನದಲ್ಲಿ ಕೇವಲ 1-2 ಗ್ರಾಂ ಶುಂಠಿಯನ್ನು ತಿನ್ನಬೇಕು. ಇದಕ್ಕಿಂತ ಹೆಚ್ಚು ತಿಂದರೆ ಹೊಟ್ಟೆ ಸಂಪೂರ್ಣ ಹಾಳಾಗುತ್ತದೆ.
ಅಷ್ಟೇ ಅಲ್ಲ ತೂಕ ಮತ್ತು ಸ್ಥೂಲಕಾಯತೆಯನ್ನು ಕಡಿಮೆ ಮಾಡಲು ಇಚ್ಛಿಸುವವರು ಕೂಡ ಶುಂಠಿಯನ್ನು ಕಡಿಮೆ ತಿನ್ನಬೇಕು. ಏಕೆಂದರೆ ಇದು ಬಹಳಷ್ಟು ಸಮಸ್ಯೆಗಳನ್ನು ಸೃಷ್ಟಿಸಬಹುದು.