1. ಉರಿಯೂತ ನಿವಾರಕ: ಶುಂಠಿ ದೇಹದಲ್ಲಿ ಉಂಟಾಗುವ ಉರಿ, ಊತವನ್ನ ಕಡಿಮೆ ಮಾಡುತ್ತದೆ. ಇದರಲ್ಲಿರುವ ಔಷದೀಯ ಗುಣಗಳು ವೇಗವಾಗಿ ಕಾರ್ಯ ನಿರ್ವಹಿಸುತ್ತವೆ.
2. ವಾಕರಿಕೆ ಕಣ್ಮರೆಯಾಗುತ್ತದೆ: ನಿಮಗೆ ಆಗಾಗ ವಾಕರಿಕೆ ಅನುಭವವಾಗುತ್ತದೆಯಾ..? ಪ್ರತಿದಿನ ಶುಂಠಿ ತಿನ್ನುವುದು ನಿಮಗೆ ಸಹಾಯ ಮಾಡುತ್ತದೆ. ಪ್ರತಿದಿನ ಶುಂಠಿ ಬಳಸುವುದರಿಂದ ವಾಕರಿಕೆ ಬೇಗ ಕಡಿಮೆಯಾಗುತ್ತದೆ. ವಿಶೇಷವಾಗಿ ಗರ್ಭಿಣಿಯರು ಮತ್ತು ಕೀಮೋಥೆರಪಿಗೆ ಒಳಗಾಗುವ ಜನರು ಇದರಿಂದ ಪ್ರಯೋಜನ ಪಡೆಯಬಹುದು.
3. ಸ್ನಾಯು ನೋವು ಕಡಿತ: ಶುಂಠಿ ತಿನ್ನುವುದು ಇದರ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಪ್ರತಿದಿನ ಶುಂಠಿಯನ್ನು ಸೇವಿಸುವುದರಿಂದ ಸ್ನಾಯು ನೋವು ಕ್ರಮೇಣ ಕಡಿಮೆಯಾಗುತ್ತದೆ.
4. ಕರುಳಿನ ಆರೋಗ್ಯ ಉತ್ತೇಜಿಸಿ, ಪಚನ ಕ್ರಿಯೆಗೆ ಸಹಕರಿಸುತ್ತದೆ: ಪ್ರತಿದಿನವೂ ಶುಂಠಿಯನ್ನು ತಿನ್ನುವುದು ನಿಮ್ಮ ಕರುಳಿನ ಚಲನೆಗೆ ಬಹಳಷ್ಟು ಒಳ್ಳೆಯದು. ನೀವು ನಿಯಮಿತವಾಗಿ ಮಲಬದ್ಧತೆಯಿಂದ ಬಳಲುತ್ತಿದ್ದರೆ, ಶುಂಠಿ ಸೇವನೆ ನಿಮಗೆ ಸಹಾಯ ಮಾಡಬಹುದು.
5. ಮುಟ್ಟಿನ ನೋವು: ತಿಂಗಳ ಈ ಸಮಯದಲ್ಲಿ ನೀವು ನಿರಂತರವಾಗಿ ನೋವು ಅನುಭವಿಸುತ್ತಿದ್ದರೆ ಶುಂಠಿ ರಾಮಬಾಣ. ಮುಟ್ಟಿನ ಸಂದರ್ಭದಲ್ಲಿ ಶುಂಠಿ ಚಹಾ ಸೇವಿಸುವುದರಿಂದ ಕಿಬ್ಬೊಟ್ಟೆಯ ನೋವು ಕಡಿಮೆಯಾಗುತ್ತದೆ.
6. ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ: ಒಂದು ತಿಂಗಳ ಕಾಲ ಪ್ರತಿದಿನ ಶುಂಠಿ ತಿನ್ನುವುದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಶುಂಠಿಯಲ್ಲಿರುವ ಪದಾರ್ಥಗಳಿಂದ ರಕ್ತದಲ್ಲಿನ ಟ್ರೈಗ್ಲಿಸರೈಡ್‌ಗಳ ಪ್ರಮಾಣ ಕಡಿಮೆಯಾಗುತ್ತದೆ ಇದರಿಂದ ಕೊಲೆಸ್ಟರಾಲ್ ಕಮ್ಮಿಯಾಗುತ್ತದೆ.
7. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಶುಂಠಿಯಲ್ಲಿರುವ ಔಷದೀಯ ಗುಣಲಕ್ಷಣಗಳು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದೇ ಕಾರಣಕ್ಕೆ ನಮ್ಮ ಹಿರಿಯರು ಶೀತವಾದ ಸಂದರ್ಭದಲ್ಲಿ ಶುಂಠಿ ಕಷಾಯ ಕುಡಿಯುತ್ತಿದ್ದರು.