alex Certify ಊಟವಾದ ತಕ್ಷಣ ಹಣ್ಣುಗಳನ್ನು ತಿನ್ನುವುದು ಅಪಾಯಕಾರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಊಟವಾದ ತಕ್ಷಣ ಹಣ್ಣುಗಳನ್ನು ತಿನ್ನುವುದು ಅಪಾಯಕಾರಿ…!

ಆರೋಗ್ಯಕರ ಮತ್ತು ಫಿಟ್ನೆಸ್‌ಗೆ ಆಹಾರವೇ ಮೂಲ. ಹಾಗಾಗಿ ನಮ್ಮ ನಿತ್ಯದ ಡಯಟ್‌ನಲ್ಲಿ ಹಣ್ಣುಗಳನ್ನು ಸೇವಿಸಬೇಕು. ಹಣ್ಣುಗಳಲ್ಲಿ ಅನೇಕ ಜೀವಸತ್ವಗಳು ಮತ್ತು ಖನಿಜಗಳಿರುತ್ತವೆ. ಹಣ್ಣುಗಳನ್ನು ಯಾವ ಸಮಯದಲ್ಲಿ ಎಷ್ಟು ಪ್ರಮಾಣದಲ್ಲಿ ತಿನ್ನಬೇಕು ಎಂಬುದು ಬಹಳ ಮುಖ್ಯ. ಆಹಾರ ಸೇವಿಸಿದ ತಕ್ಷಣ ಹಣ್ಣುಗಳನ್ನು ತಿನ್ನುವುದು ಒಳ್ಳೆಯದಲ್ಲ. ಅದೇ ರೀತಿ ಹುಳಿಯಾದ ಹಣ್ಣುಗಳನ್ನು ತಿಂದ ನಂತರ ತಕ್ಷಣ ಊಟ ಮಾಡಬಾರದು. ಅದು ದೇಹಕ್ಕೆ ತುಂಬಾ ಹಾನಿಕಾರಕ. ಆದ್ದರಿಂದ ನಿಂಬೆಹಣ್ಣು, ಕಿತ್ತಳೆ, ದ್ರಾಕ್ಷಿಯಂತಹ ಹಣ್ಣುಗಳನ್ನು ಊಟದ ನಂತರ ಸಹ ತಿನ್ನಬಾರದು.

ಊಟವಾದ ತಕ್ಷಣವೇ ಹಣ್ಣುಗಳನ್ನು ಸೇವಿಸಿದರೆ ಹೊಟ್ಟೆ ಭಾರವಾದಂತೆನಿಸುತ್ತದೆ. ಗ್ಯಾಸ್ ಮತ್ತು ಅಜೀರ್ಣ ಕೂಡ ಉಂಟಾಗಬಹುದು. ಇದು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಊಟದ ನಂತರ ಹಣ್ಣುಗಳನ್ನು ಸೇವಿಸುವುದರಿಂದ ಅನೇಕರು ಜಠರಗರುಳಿನ ಸಮಸ್ಯೆಗಳನ್ನು ಎದುರಿಸುತ್ತಾರೆ.

ಊಟದ ನಂತರ ಹಣ್ಣುಗಳನ್ನು ತಿನ್ನುವುದರಿಂದ ದೇಹಕ್ಕೆ ಸರಿಯಾದ ಪೋಷಣೆ ದೊರೆಯುವುದಿಲ್ಲ. ಸಿಟ್ರಸ್ ಹಣ್ಣುಗಳು ಅನೇಕ ರೀತಿಯ ಪೋಷಕಾಂಶಗಳನ್ನು ಹೊಂದಿರುತ್ತವೆ. ಊಟವಾದ ನಂತರ ಹಣ್ಣುಗಳನ್ನು ಸೇವಿಸಿದರೆ ಪೋಷಕಾಂಶಗಳು ಸರಿಯಾಗಿ ಜೀರ್ಣವಾಗುವುದಿಲ್ಲ. ಈ ಕಾರಣದಿಂದಾಗಿ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ.

ಊಟದ ನಂತರ ಹುಳಿ ಹಣ್ಣುಗಳನ್ನು ತಿನ್ನುವುದು ಹೊಟ್ಟೆಯಲ್ಲಿ ಆಮ್ಲ ರಚನೆಗೆ ಕಾರಣವಾಗುತ್ತದೆ. ಇದರಿಂದಾಗಿ ಅಸಿಡಿಟಿ ಸಮಸ್ಯೆ ಜಾಸ್ತಿಯಾಗಬಹುದು. ಅಸಿಡಿಟಿಯಿಂದ ಚಡಪಡಿಕೆ, ಅಜೀರ್ಣ ಮತ್ತು ಎದೆಯುರಿ ಉಂಟಾಗುವ ಸಾಧ್ಯತೆಗಳಿರುತ್ತವೆ. ಆಹಾರ ಜೀರ್ಣವಾಗಲು 1 ರಿಂದ 1.30 ಗಂಟೆ ಬೇಕಾಗುತ್ತದೆ. ಬೆಳಗಿನ ಉಪಾಹಾರಕ್ಕೆ ತಿಂದ ಬ್ರೆಡ್-ಆಮ್ಲೆಟ್ ಸರಿಯಾಗಿ ಜೀರ್ಣವಾಗುವಷ್ಟರಲ್ಲಿ ಹಣ್ಣುಗಳನ್ನು ಸೇವಿಸುವುದು ಸೂಕ್ತವಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...