alex Certify ಹಣ್ಣು ಸೇವಿಸುವುದು ಊಟಕ್ಕೆ ಮೊದಲೋ….? ನಂತರವೋ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಣ್ಣು ಸೇವಿಸುವುದು ಊಟಕ್ಕೆ ಮೊದಲೋ….? ನಂತರವೋ…..?

ನಿತ್ಯ ತಾಜಾ ಹಣ್ಣುಗಳನ್ನು ಸೇವಿಸುವುದು ಬಹಳ ಮುಖ್ಯ, ಇದರಿಂದ ನಮ್ಮ ದೇಹಕ್ಕೆ ಬೇಕಾದ ಖನಿಜ, ಜೀವಸತ್ವ, ಫೈಬರ್ ಮತ್ತು ಆಂಟಿ ಅಕ್ಸಿಡೆಂಟ್ ಗಳು ಹೇರಳವಾಗಿ ಲಭಿಸುತ್ತವೆ. ಆದರೆ ಅದನ್ನು ಯಾವ ಸಮಯದಲ್ಲಿ ಸೇವಿಸಬೇಕು ಎಂಬುದು ನಿಮಗೆ ಗೊತ್ತೇ..?

ಅಧ್ಯಯನಗಳ ಪ್ರಕಾರ ನಿಮ್ಮ ಊಟದಲ್ಲಿ ಅರ್ಧ ಭಾಗ ತರಕಾರಿ ಮತ್ತು ಹಣ್ಣುಗಳಿಗೆ ಮೀಸಲಾಗಿರಬೇಕು ಎನ್ನಲಾಗಿದೆ. ಆದರೆ ಊಟದ ಮಧ್ಯೆ ಅಥವಾ ಊಟದ ಬಳಿಕ ಹಣ್ಣುಗಳನ್ನು ಸೇವಿಸುವುದು ಒಳ್ಳೆಯದಲ್ಲ.

ಬೆಳಗ್ಗೆ ಎದ್ದಾಕ್ಷಣ ಒಂದು ಲೋಟ ನೀರು ಕುಡಿದು ಬಳಿಕ ಹಣ್ಣುಗಳನ್ನು ತಿನ್ನಬೇಕು. ಇದರಿಂದ ದೇಹ ತೂಕವೂ ಇಳಿಯುತ್ತದೆ. ದಿನವಿಡೀ ಕೆಲಸ ಮಾಡುವ ಚೈತನ್ಯವೂ ಸಿಗುತ್ತದೆ.

ಇದರ ಹೊರತಾಗಿ ಹಣ್ಣುಗಳನ್ನು ಬೆಳಗ್ಗೆ, ಮಧ್ಯಾಹ್ನ ಅಥವಾ ರಾತ್ರಿಯ ಊಟದ ಮಧ್ಯದ ಅವಧಿಯಲ್ಲಿ, ಸ್ನಾಕ್ಸ್ ರೂಪದಲ್ಲಿ ಸೇವಿಸಬಹುದು.

ಊಟಕ್ಕೆ ಮುಂಚೆ ಹಣ್ಣು ತಿಂದರೆ ಫೈಬರ್ ಹೆಚ್ಚಿರುವ ಈ ಹಣ್ಣುಗಳು ಬೇಗ ಜೀರ್ಣವಾಗದೆ ಉಳಿದಾವು. ಅಲ್ಲದೆ ಹಣ್ಣುಗಳಲ್ಲಿ ಸಕ್ಕರೆ ಅಂಶ ಸಾಕಷ್ಟಿರುವುದರಿಂದ ರಾತ್ರಿ ಮಲಗುವ ಮುನ್ನ ಕಡ್ಡಾಯವಾಗಿ ಹಣ್ಣುಗಳನ್ನು ಸೇವಿಸದಿರಿ.

ಹಣ್ಣುಗಳನ್ನು ಸೇವಿಸುವುದು ಎಷ್ಟು ಮುಖ್ಯವೋ, ಸೂಕ್ತ ಸಮಯದಲ್ಲಿ ಅದನ್ನು ತಿನ್ನುವುದು ಬಹಳ ಮುಖ್ಯ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...