ಬಿಸಿ ಬಿಸಿ ಅಡುಗೆ ಊಟ ಮಾಡಿ ತಿನ್ನುವ ಅಭ್ಯಾಸವುಳ್ಳವರಿಗೆ ಆಹಾರ ತಣ್ಣಗಿದ್ದರೆ ರುಚಿಸುವುದಿಲ್ಲ. ಅವರು ಅದನ್ನು ಮತ್ತೆ ಒಲೆಯ ಮೇಲೋ ಅಥವಾ ಓವನ್ ನಲ್ಲೋ ಇಟ್ಟು ಬಿಸಿ ಮಾಡುತ್ತಾರೆ. ಕೆಲವು ಪದಾರ್ಥಗಳನ್ನು ಬಿಸಿ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ. ಅಂತಹ ಕೆಲವು ಆಹಾರ ಇಲ್ಲಿದೆ ನೋಡಿ.
ಪಾಲಕ್ : ಪಾಲಕ್ ಸೊಪ್ಪನ್ನು ಮತ್ತೆ ಮತ್ತೆ ಬಿಸಿ ಮಾಡಿ ತಿನ್ನುವುದರಿಂದ ನಿಮಗೆ ಅನಾರೋಗ್ಯ ಕಾಡಬಹುದು. ಇದರಿಂದ ಕ್ಯಾನ್ಸರ್ ಆಗುವ ಸಾಧ್ಯತೆ ಹೆಚ್ಚು. ಇದರಲ್ಲಿರುವ ನೈಟ್ರೇಟ್ ನಿಂದಾಗಿ ಮತ್ತೆ ಬಿಸಿ ಮಾಡಿದಾಗ ಇದು ಕ್ಯಾನ್ಸರ್ ತರುವಂತ ಸತ್ವಗಳಾಗಿ ಮಾರ್ಪಾಡಾಗುತ್ತದೆ ಎನ್ನಲಾಗಿದೆ.
ಚಿಕನ್ : ತಣ್ಣಗಾದ ಚಿಕನ್ ಅನ್ನು ಮತ್ತೆ ಬಿಸಿ ಮಾಡಿ ತಿನ್ನುವುದರಿಂದ ಅದರಲ್ಲಿನ ಪ್ರೊಟೀನ್ ಅಂಶ ಬದಲಾಗುತ್ತದೆ. ಇದರಿಂದ ಪಚನಕ್ರಿಯೆಯ ಸಮಸ್ಯೆಗಳು ಉಂಟಾಗುತ್ತವೆ.
ಬೀಟ್ ರೂಟ್ : ಬೀಟ್ ರೂಟ್ ಖಾದ್ಯವನ್ನು ಬಿಸಿ ಮಾಡಿ ತಿನ್ನುವುದರಿಂದ ಅದರಲ್ಲಿನ ನೈಟ್ರೇಟ್ ನಾಶವಾಗುತ್ತದೆ. ಒಮ್ಮೆ ಬೀಟ್ ರೂಟ್ ಆಹಾರ ಹೆಚ್ಚಿದ್ದಲ್ಲಿ ಅದನ್ನು ಫ್ರಿಜ್ ನಲ್ಲಿಟ್ಟು ತಿನ್ನುವುದಕ್ಕೆ ಒಂದು ಗಂಟೆ ಮೊದಲೇ ಹೊರ ತೆಗೆದಿಟ್ಟು ನಂತರ ಬಿಸಿ ಮಾಡದೇ ಸೇವಿಸಿ.
ಅಣಬೆ (ಮಶ್ರೂಮ್) : ಅಣಬೆ ಪ್ರೊಟೀನ್ ಗಳ ಆಗರವಾಗಿದೆ. ಇದನ್ನು ಫ್ರೆಶ್ ಆಗಿಯೇ ತಿನ್ನಬೇಕು. ಮತ್ತೆ ಮತ್ತೇ ಬಿಸಿ ಮಾಡುವುದರಿಂದ ಇದು ಆರೋಗ್ಯಕ್ಕೆ ಹಾನಿ ಮಾಡುತ್ತದೆ.
ಮೊಟ್ಟೆ : ಮೊಟ್ಟೆಯನ್ನು ಎರಡನೇ ಬಾರಿ ಬಿಸಿ ಮಾಡಿ ತಿನ್ನುವುದರಿಂದ ಅದರಲ್ಲಿನ ಪ್ರೊಟೀನ್ ಗಳು ವಿಷಯುಕ್ತವಾಗುತ್ತವೆ.
ಆಲೂಗಡ್ಡೆ : ಆಲೂಗಡ್ಡೆ ನಾಲಿಗೆಗೆ, ದೇಹಕ್ಕೆ ಎರಡಕ್ಕೂ ಒಳ್ಳೆಯದು. ಆದರೆ ಇದನ್ನು ಬಹಳ ಸಮಯ ಇಟ್ಟು ತಿನ್ನಬಾರದು ಮತ್ತು ಬಿಸಿ ಮಾಡಲೂಬಾರದು. ಇದರಿಂದ ಪಚನಕ್ರಿಯೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.