ಪ್ರತಿ ದಿನ ವ್ಯಾಯಾಮ, ವಾಕಿಂಗ್, ಜಿಮ್ ಅಂತಾ ಒಂದಾದ ಮೇಲೆ ಒಂದು ಕಸರತ್ತು ಮಾಡಿದ್ರೂ ಬೊಜ್ಜು ಕರಗುವುದಿಲ್ಲ. ವ್ಯಾಯಾಮದ ಜೊತೆ ಡಯಟ್ ಮಾಡಿ ಜನರು ಸುಸ್ತಾಗಿರುತ್ತಾರೆ. ಆದ್ರೆ ಈ ಸಿಂಪಲ್ ಟಿಪ್ಸ್ ನಿಮ್ಮ ಬೊಜ್ಜನ್ನು ಸುಲಭವಾಗಿ ಕರಗಿಸುತ್ತದೆ. ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿದ್ರೆ ತೂಕ ಇಳಿಯುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ.
ಸಂಶೋಧಕರ ಪ್ರಕಾರ ಬೆಳಿಗ್ಗೆಗಿಂತ ಮಧ್ಯಾಹ್ನ ಕ್ಯಾಲೋರಿ ಬರ್ನ್ ಆಗುವ ಪ್ರಮಾಣ ಶೇಕಡಾ 10 ಕ್ಕಿಂತ ಹೆಚ್ಚು. ಹಾಗಾಗಿ ಮಧ್ಯಾಹ್ನ ಅವಶ್ಯಕವಾಗಿ ಊಟ ಮಾಡಬೇಕು. ಚಯಾಪಚಯ ಕ್ರಿಯೆ ಮಧ್ಯಾಹ್ನದ ಸಮಯದಲ್ಲಿ ಸರಿಯಾಗಿ ಕೆಲಸ ಮಾಡುವುದ್ರಿಂದ ಕ್ಯಾಲೋರಿ ವೇಗವಾಗಿ ಬರ್ನ್ ಆಗುತ್ತದೆ.
ಅನಿಯಮಿತ ಸಮಯದಲ್ಲಿ ಆಹಾರ ಸೇವನೆ ಹಾಗೂ ನಿದ್ರೆ ತೂಕ ಏರಿಕೆಗೆ ಕಾರಣವಾಗುತ್ತದೆ. ತಿನ್ನುವುದು ಮಾತ್ರ ತೂಕ ಹೆಚ್ಚಾಗಲು ಕಾರಣವಾಗುವುದಿಲ್ಲ. ಯಾವ ಸಮಯದಲ್ಲಿ ಆಹಾರ ಸೇವನೆ ಮಾಡುತ್ತೀರಿ ಮತ್ತು ಎಷ್ಟು ಸಮಯ ಮಲಗುತ್ತೀರಿ ಎಂಬುದು ಕೂಡ ಮಹತ್ವದ ಪಾತ್ರ ವಹಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.
ಪ್ರತಿ ದಿನ ಒಂದೇ ಸಮಯದಲ್ಲಿ ಆಹಾರ ಸೇವನೆ ಮಾಡಬೇಕು. ಇದು ತೂಕ ಇಳಿಸುವ ಜೊತೆಗೆ ಚಯಾಪಚಯ ಕ್ರಿಯೆಯನ್ನು ಆರೋಗ್ಯಕರವಾಗಿಡುತ್ತದೆ. ಅನೇಕ ರೋಗಗಳಿಂದ ದೇಹವನ್ನು ದೂರವಿಡುತ್ತದೆ. ತೂಕ ಇಳಿಸಿಕೊಳ್ಳುವ ಇಚ್ಛೆ ನಿಮಗಿದ್ದರೆ ಪ್ರತಿ ದಿನ ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡಿ. ಜೊತೆಗೆ ಬೆಳಿಗ್ಗೆ ಎದ್ದ 30 ನಿಮಿಷದೊಳಗೆ ಆಹಾರ ಸೇವನೆ ಮಾಡಿ.