ಮಾಂಸಾಹಾರಕ್ಕಿಂತ ಸಸ್ಯಾಹಾರ ಸೇವನೆ ಒಳ್ಳೆಯದು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ನಿಜಕ್ಕೂ ಅದು ಹೇಗೆ ಮತ್ತು ಯಾಕೆ ಎಂಬುದು ನಿಮಗೆ ಗೊತ್ತೇ?
ಮಾಂಸಾಹಾರಕ್ಕೆ ಹೋಲಿಸಿದರೆ ಸಸ್ಯಾಹಾರ ಸೇವನೆಯಿಂದ ದೇಹ ತೂಕವನ್ನು ಸುಲಭದಲ್ಲಿ ಇಳಿಸಬಹುದು. ಸಸ್ಯಾಹಾರದಲ್ಲಿ ಕೊಬ್ಬಿನ ಅಂಶ ಕಡಿಮೆ ಇದ್ದು ಜೀರ್ಣಕ್ರಿಯೆಯನ್ನು ಹೆಚ್ಚಿಸುವ ಮೂಲಕ ದೇಹ ತೂಕವನ್ನು ಕಡಿಮೆ ಮಾಡುತ್ತದೆ.
ಸಸ್ಯಾಹಾರಿ ಊಟದಲ್ಲಿ ಧಾನ್ಯಗಳು, ಹಸಿರು ಎಲೆಗಳು, ತರಕಾರಿಗಳು ಸೇರಿರುವುದರಿಂದ ದೇಹದಲ್ಲಿ ಸಕ್ಕರೆ ಅಂಶ ನಿಯಂತ್ರಣದಲ್ಲಿರುತ್ತದೆ. ಹಾಗಾಗಿ ಮಧುಮೇಹಿಗಳಿಗೆ ಸಸ್ಯಾಹಾರ ಹೇಳಿ ಮಾಡಿಸಿದ ತಿನಿಸು.
ರಕ್ತದೊತ್ತಡ ನಿಯಂತ್ರಣಕ್ಕೂ ಸಸ್ಯಹಾರದ ಸೇವನೆ ಒಳ್ಳೆಯದೇ. ಸಸ್ಯ ಆಧಾರಿತ ತಿನಿಸುಗಳಲ್ಲಿ ಕೊಬ್ಬು, ಸೋಡಿಯಂ ಮತ್ತು ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಇರುವುದರಿಂದ ರಕ್ತದೊತ್ತಡವೂ ನಿಯಂತ್ರಣದಲ್ಲಿ ಇರುತ್ತದೆ.