ಸಿಹಿ ತಿನ್ನುವುದೆಂದರೆ ಎಲ್ಲರಿಗೂ ತುಂಬಾ ಇಷ್ಟ. ಅದಕ್ಕಾಗಿ ಸಕ್ಕರೆಯುಕ್ತ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ತಿನ್ನುತ್ತಾರೆ. ಆದರೆ ಇದು ಆರೋಗ್ಯಕ್ಕೆ ಹಾನಿಕಾರಕ. ಹಾಗಾಗಿ ನಿಮಗೆ ಸಿಹಿ ತಿನ್ನಬೇಕು ಎನಿಸಿದಾಗ ಸಕ್ಕರೆ ಬದಲಿಗೆ ಇವುಗಳನ್ನು ಸೇವಿಸಿ.
ಹಣ್ಣುಗಳು : ಹಣ್ಣುಗಳು ನೈಸರ್ಗಿಕವಾಗಿ ಸಿಹಿಯಾಗಿರುತ್ತದೆ ಮತ್ತು ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗಾಗಿ ಸಿಹಿ ಸೇವಿಸಬೇಕು ಎನಿಸಿದಾಗ ಹಣ್ಣುಗಳ ರಸ ಸೇವಿಸಿ.
ಪುದೀನ : ಪುದೀನದಿಂದ ತಯಾರಿಸಿದ ಚೂಯಿಂಗಮ್ ಸೇವಿಸಿ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಹಣ್ಣು ಮಿಶ್ರಿತ ಮೊಸರು : ಸಿಹಿ ತಿನ್ನುವ ಬಯಕೆಯಾದಾಗ ಮೊಸರಿಗೆ ಹಣ್ಣುಗಳನ್ನು ಮಿಕ್ಸ್ ಮಾಡಿ ಸೇವಿಸಿ. ಇವೆರಡು ಕೂಡ ಆರೋಗ್ಯಕ್ಕೆ ತುಂಬಾ ಉತ್ತಮ.
ಸಕ್ಕರೆ ತಿನ್ನಬೇಕು ಎನಿಸಿದಾಗ ಹಣ್ಣುಗಳಿಂದ ತಯಾರಿಸಿದ ಮಿಲ್ಕ್ ಶೇಕ್ ಕುಡಿಯಿರಿ. ಇದಕ್ಕೆ ಸಕ್ಕರೆ ಬದಲು ಸಿಹಿಯಾದ ಒಣ ಹಣ್ಣುಗಳನ್ನು ಸೇರಿಸಬಹುದು. ಇದು ಕೂಡ ಆರೋಗ್ಯಕ್ಕೆ ಒಳ್ಳೆಯದು.