ಹಸಿ ಈರುಳ್ಳಿ ಸೇವಿಸುವುದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭವಿದೆ. ಕೆಲವರು ಊಟದ ನಡುವೆ ಇದನ್ನು ಸೇವಿಸುತ್ತಾರೆ. ಕೆಲವರಿಗೆ ಇದರ ವಾಸನೆ ಎಂದರೆ ಆಗುವುದಿಲ್ಲ. ಅಂತವರು ಮೊದಲು ಸ್ವಲ್ಪ ಸ್ವಲ್ಪ ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ದೇಹದ ಆರೋಗ್ಯಕ್ಕೆ ಇದು ತುಂಬಾನೇ ಒಳ್ಳೆಯದು.
ದಿನಕ್ಕೆ ಅರ್ಧ ತುಂಡಾದರೂ ಹಸಿ ಈರುಳ್ಳಿ ಸೇವಿಸಿ. ಇದರಿಂದ ನಿಮ್ಮ ಇಮ್ಯೂನಿಟಿ ಹೆಚ್ಚಾಗುತ್ತದೆ. ಈರುಳ್ಳಿಯಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ. ಹಾಗೇ ಇದರ ಸೇವನೆಯಿಂದ ಕೆಂಪು ರಕ್ತಕಣಗಳು ಹೆಚ್ಚಾಗುತ್ತದೆ. ರೋಗದ ವಿರುದ್ಧ ಹೋರಾಡಲು ಇದು ಸಹಾಯ ಮಾಡುತ್ತದೆ. ಈರುಳ್ಳಿ ಇಷ್ಟಪಡದವರು ಪುದೀನಾ ಎಲೆಗಳ ಜತೆ ಸ್ವಲ್ಪ ಈರುಳ್ಳಿ ಸೇರಿಸಿ ಚಟ್ನಿ ಮಾಡಿಕೊಂಡು ಸ್ನಾಕ್ಸ್ ಜತೆ ಸವಿಯಿರಿ.
ಇನ್ನು ಇದು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಈರುಳ್ಳಿ ಹಾಗೂ ಟೊಮೆಟೊ ಇವೆರಡರ ಮಿಶ್ರಣದ ಸಲಾಡ್ ಮಾಡಿಕೊಂಡು ಆಗಾಗ ಸವಿಯುತ್ತಿರಿ. ಇದರಿಂದ ಹೃದಯಕ್ಕೂ ತುಂಬಾ ಒಳ್ಳೆಯದು.