ಒಣದ್ರಾಕ್ಷಿ ಸೇವನೆಯಿಂದ ದೇಹಕ್ಕೆ ಹತ್ತು ಹಲವು ಪ್ರಯೋಜನಗಳಿವೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಇದನ್ನು ನಿತ್ಯ ಸೇವಿಸುವುದರಿಂದ ದೇಹ ತೂಕವನ್ನೂ ಹೆಚ್ಚಿಸಿಕೊಳ್ಳಬಹುದು.
ಒಣದ್ರಾಕ್ಷಿಯಲ್ಲಿ ನ್ಯೂಟ್ರಿಷನ್ ಹೇರಳವಾಗಿರುತ್ತದೆ. ಇದರಲ್ಲಿ ವಿಟಮಿನ್ ಸಿ ಬೇಕಾದಷ್ಟಿದ್ದು, ರಾತ್ರಿ ವೇಳೆ ಇದನ್ನು ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವಿಸುತ್ತಿರಿ. ಪ್ರತಿದಿನ ಹತ್ತು-ಹದಿನೈದು ದ್ರಾಕ್ಷಿ ತಿಂದರೆ ಸಾಕು, ದೇಹದ ರಕ್ತಹೀನತೆ ಸಮಸ್ಯೆಯೂ ದೂರವಾಗುತ್ತದೆ.
ಇದರಿಂದ ತ್ವಚೆಯ ಕಾಂತಿ ಹೆಚ್ಚುತ್ತದೆ ಮೊಡವೆ ಸಮಸ್ಯೆ ದೂರವಾಗುತ್ತದೆ. ಇದರಲ್ಲಿರುವ ಆಂಟಿ ಬ್ಯಾಕ್ಟೀರಿಯಾ ಗುಣಗಳು ಮಕ್ಕಳಿಗೆ ಪದೇ ಪದೇ ಕಾಡುವ ಶೀತ ಜ್ವರ ಸಮಸ್ಯೆ ಬರದಂತೆ ನೋಡಿಕೊಳ್ಳುತ್ತದೆ.
ಇದು ಕೆಟ್ಟ ಕೊಬ್ಬನ್ನು ಕರಗಿಸಿ ಒಳ್ಳೆಯ ಕೊಬ್ಬನ್ನು ದೇಹದಲ್ಲಿ ಉತ್ಪಾದಿಸುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣಗಳು ದೇಹದಲ್ಲಿ ಕ್ಯಾನ್ಸರ್ ಗೆಡ್ಡೆ ಬೆಳೆಯದಂತೆ ನೋಡಿಕೊಳ್ಳುತ್ತದೆ. ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಲೂ ಇದು ಸಹಕಾರಿ.