ಒಸಡುಗಳು ದುರ್ಬಲವಾದಾಗ ಕೆಲವೊಮ್ಮೆ ಆಹಾರ ಸೇವಿಸುವಾಗ, ಹಲ್ಲುಜ್ಜುವಾಗ ಒಸಡುಗಳಲ್ಲಿ ರಕ್ತ ಬರುತ್ತದೆ. ಇದರಿಂದ ಹಲ್ಲು ಮತ್ತು ಬಾಯಿಗೆ ಹಾನಿಯಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಿ ನಿಮ್ಮ ಒಸಡುಗಳನ್ನು ಗಟ್ಟಿಯಾಗಿಸಲು ಈ ಹಣ್ಣುಗಳನ್ನು ಸೇವಿಸಿ.
*ಸೇಬು : ಒಸಡುಗಳ ರಕ್ತಸ್ರಾವ ಸಮಸ್ಯೆಯನ್ನು ನಿವಾರಿಸಲು ಸೇಬುಹಣ್ಣನ್ನು ಸೇವಿಸಿ. ಇದರಿಂದ ಹಲ್ಲುಗಳು ಸ್ಚಚ್ಚವಾಗಿ ಹೊಳೆಯುತ್ತದೆ. ಒಸಡುಗಳು ಗಟ್ಟಿಯಾಗುತ್ತದೆ.
*ರಾಸ್ಬೆರಿ: ರಾಸ್ಬೆರಿಯನ್ನು ಸೇವಿಸುವುದರಿಂದ ಒಸಡುಗಳು ಆರೋಗ್ಯವಾಗಿರುತ್ತವೆ. ಇದನ್ನು ದಿನಕ್ಕೆ ಎರಡು ಮೂರು ಬಾರಿ ತಿನ್ನಿ. ಇವುಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿ ಆದರೆ ಆ ವೇಳೆ ಡೈರಿ ಉತ್ಪನ್ನಗಳನ್ನು ತೆಗೆದುಕೊಳ್ಳಬೇಡಿ.
*ಕಿತ್ತಳೆ : ಕಿತ್ತಳೆಯಲ್ಲಿ ವಿಟಮಿನ್ ಸಿ ಅಧಿಕವಾಗಿರುತ್ತದೆ. ಒಂದು ಕಪ್ ಕಿತ್ತಳೆ ರಸಕ್ಕೆ ½ ಚಮಚ ಸಕ್ಕರೆ , 1 ಚಿಟಿಕೆ ಜೀರಿಗೆ ಪುಡಿ ಮಿಕ್ಸ್ ಮಾಡಿ ಸೇವಿಸಿದರೆ ಒಸಡುಗಳಲ್ಲಿ ಬರುವ ರಕ್ತಸ್ರಾವದ ಸಮಸ್ಯೆ ದೂರವಾಗುತ್ತದೆ.