alex Certify ಬೇಸಿಗೆಯಲ್ಲಿ ದೇಹ ತಂಪಾಗಿರಿಸಲು ಪ್ರತಿದಿನ ಸೇವಿಸಿ ಈ ಹಣ್ಣು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸಿಗೆಯಲ್ಲಿ ದೇಹ ತಂಪಾಗಿರಿಸಲು ಪ್ರತಿದಿನ ಸೇವಿಸಿ ಈ ಹಣ್ಣು

ಬೇಸಿಗೆಯಲ್ಲಿ ಹಣ್ಣುಗಳ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ವಿಪರೀತ ಸೆಖೆಯಲ್ಲಿ ಹಣ್ಣುಗಳನ್ನು ಸೇವನೆ ಮಾಡದೇ ಇದ್ದಲ್ಲಿ ಅನೇಕ ರೋಗಗಳನ್ನು ಎದುರಿಸಬೇಕಾಗುತ್ತದೆ. ಅಷ್ಟೇ ಅಲ್ಲ ಸೆಖೆಗಾಲದಲ್ಲಿ ರಸಭರಿತವಾದ ವಸ್ತುಗಳನ್ನು ತಿನ್ನಬೇಕೆಂದು ಅನಿಸುತ್ತದೆ. ಬೇಸಿಗೆಯಲ್ಲಿ ಯಾವ ಹಣ್ಣುಗಳನ್ನು ತಿನ್ನುವುದರಿಂದ ಹೊಟ್ಟೆಯನ್ನು ಸಂಪೂರ್ಣವಾಗಿ ತಂಪಾಗಿಡಬಹುದು ಎಂಬುದನ್ನು ನೋಡೋಣ.

ಕಲ್ಲಂಗಡಿ

ಸುಡು ಬಿಸಿಲಿನಲ್ಲಿ ದೇಹವನ್ನು ತಂಪಾಗಿಡಲು ಅನೇಕರು ಕೂಲ್‌ ಡ್ರಿಂಕ್ಸ್‌ ಕುಡಿಯುತ್ತಾರೆ. ಆದರೆ ಇದು ಆರೋಗ್ಯಕ್ಕೆ ಹಾನಿಕಾರಕ. ಅವುಗಳ ಬದಲು ರಸಭರಿತವಾದ ಹಣ್ಣುಗಳನ್ನು ಸೇವಿಸಬೇಕು. ಬೇಸಿಗೆಯಲ್ಲಿ ಕಲ್ಲಂಗಡಿ ಸೇವಿಸುವುದು ಉತ್ತಮ.

ರಬೂಜ

ದೇಹವನ್ನು ತಾಜಾ ಮತ್ತು ತಂಪಾಗಿರಿಸಲು ಕರಬೂಜ ಸಹಾಯ ಮಾಡುತ್ತದೆ. ಇದು ಬೇಸಿಗೆಯ ಋತುಮಾನದ ಹಣ್ಣು. ಇದನ್ನು ತಿನ್ನುವುದರಿಂದ ದೇಹಕ್ಕೆ ಸಾಕಷ್ಟು ಪೋಷಕಾಂಶಗಳು ಸಿಗುತ್ತವೆ. ದೇಹದಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಹೆಚ್ಚುತ್ತದೆ.

ಲಿಚಿ

ಬೇಸಿಗೆ ಕಾಲದಲ್ಲಿ ಲಿಚಿಯನ್ನು ಸಹ ಸೇವಿಸಬಹುದು. ಇದರಲ್ಲಿ ಹೆಚ್ಚಿನ ಪ್ರಮಾಣದ ಪೋಷಕಾಂಶಗಳು ಕಂಡುಬರುತ್ತವೆ. ಉತ್ತಮ ಪ್ರಮಾಣದ ತಾಮ್ರ ಮತ್ತು ಪೊಟ್ಯಾಸಿಯಮ್ ಇರುತ್ತದೆ. ಇದರಲ್ಲಿ ಖನಿಜಗಳೂ ಸಾಕಷ್ಟಿವೆ. ರಕ್ತದ ಕೊರತೆಯನ್ನು ಹೋಗಲಾಡಿಸಲು ಲಿಚಿ ಸಹಕಾರಿಯಾಗಿದೆ.

ನೇರಳೆ ಹಣ್ಣು

ಬೇಸಿಗೆಯಲ್ಲಿ ನೇರಳೆ ಹಣ್ಣುಗಳು ಹೇರಳವಾಗಿ ಸಿಗುತ್ತವೆ. ಇವು ಅನೇಕ ಪೋಷಕಾಂಶಗಳನ್ನು ಹೊಂದಿರುತ್ತವೆ. ದೇಹವನ್ನು  ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತವೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಈ ಹಣ್ಣನ್ನು ಬಹಳ ಉತ್ಸಾಹದಿಂದ ತಿನ್ನುತ್ತಾರೆ. ಇದು ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ರಂಜಕ ಮತ್ತು ಇತರ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ವಿಟಮಿನ್ ಬಿ6 ಕೂಡ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತದೆ.

ಅನಾನಸ್

ಮಕ್ಕಳಿಗೆ ಅನಾನಸ್ ಹಣ್ಣು ಫೇವರಿಟ್.‌ ಸೆಖೆಗಾಲದಲ್ಲಿ ಇದನ್ನು ಪ್ರತಿದಿನ ಸೇವಿಸಬೇಕು. ಇದರಲ್ಲಿರುವ ಫೈಬರ್ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...