alex Certify ಕಣ್ಣುಗಳ ರಕ್ಷಣೆಗೆ ಸೇವಿಸಿ ಈ ಆಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣುಗಳ ರಕ್ಷಣೆಗೆ ಸೇವಿಸಿ ಈ ಆಹಾರ

ನಿಮ್ಮ ಮುಖದ ಹಾಗೂ ದೇಹದ ಸೌಂದರ್ಯವನ್ನು ಕಾಪಾಡುವಲ್ಲಿ ಕಣ್ಣಿನ ಪಾತ್ರ ಬಹಳ ದೊಡ್ಡದು. ಆದರೆ ವರ್ಕ್ ಫ್ರಂ ಹೋಮ್ ಆರಂಭವಾದ ಬಳಿಕ ಮತ್ತು ಆನ್ ಲೈನ್ ಕ್ಲಾಸ್ ಗಳು ಬಿಡುವಿಲ್ಲದೆ ನಡೆಯಲು ಆರಂಭವಾದ ಬಳಿಕ ಕಣ್ಣುಗಳಿಗೆ ಬಿಡುವೇ ಇಲ್ಲದಂತಾಗಿದೆ.

ಕಣ್ಣುಗಳ ಆರೈಕೆಗಾಗಿ ನೀವು ನಿತ್ಯ ಈ ಆಹಾರಗಳನ್ನು ಸೇವಿಸುವುದು ಬಹಳ ಒಳ್ಳೆಯದು. ದ್ವಿದಳ ಧಾನ್ಯಗಳು, ಬಟಾಣಿ, ಎಳ್ಳು, ಬೇಳೆಕಾಳುಗಳು, ಬಾದಾಮಿ ಮೊದಲಾದ ಪದಾರ್ಥಗಳಲ್ಲಿ ಕಣ್ಣಿನ ರೆಟಿನಾವನ್ನು ರಕ್ಷಿಸುವ ಮತ್ತು ಪೊರೆಯ ಬೆಳವಣಿಗೆಯನ್ನು ಕಡಿಮೆ ಮಾಡುವ ಗುಣಗಳನ್ನು ಒಳಗೊಂಡಿವೆ.

ಪಿಸ್ತಾ, ವಾಲ್ ನಟ್, ನೆಲಕಡಲೆ ಮೊದಲಾದ ಬೀಜಗಳಲ್ಲಿ ಒಮೆಗಾ 3 ಧಾರಾಳವಾಗಿದ್ದು ಇವು ವಿಟಮಿನ್ ಇ ಯನ್ನು ಕೂಡಾ ಒದಗಿಸುತ್ತದೆ. ಇದು ಕಣ್ಣುಗಳಿಗೆ ಹಾನಿಯಾಗುವುದನ್ನು ತಡೆಗಟ್ಟುತ್ತದೆ.

ಹಸಿರು ಎಲೆ, ತರಕಾರಿಗಳನ್ನು ಧಾರಾಳವಾಗಿ ಸೇವಿಸಿ. ಸೊಪ್ಪಿನಲ್ಲಿ ವಿಟಮಿನ್ ಎ ಧಾರಾಳವಾಗಿದ್ದು ಇದು ದೀರ್ಘ ಕಾಲದ ತನಕ ನಿಮ್ಮ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...