alex Certify ಹಲ್ಲಿನ ಆರೋಗ್ಯ ವೃದ್ಧಿಸಲು ಸೇವಿಸಿ ಈ ಆಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಲ್ಲಿನ ಆರೋಗ್ಯ ವೃದ್ಧಿಸಲು ಸೇವಿಸಿ ಈ ಆಹಾರ

ನಾವು ತಿನ್ನುವ ಆಹಾರ, ಆರೋಗ್ಯದ ಮೇಲೆ ಎಷ್ಟೆಲ್ಲಾ ಪರಿಣಾಮ ಬೀರುತ್ತದೆ ನೋಡಿ. ಕ್ಯಾಂಡಿ, ಸೋಡಾ ನಮ್ಮ ಆರೋಗ್ಯಕ್ಕೆ ಪೂರಕವಲ್ಲ. ನೈಸರ್ಗಿಕ ವಿಧಾನಗಳ ಮೂಲಕವೇ ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅದಕ್ಕಾಗಿ ಹಣ್ಣು ತರಕಾರಿ ಸೇವನೆಯನ್ನು ರೂಢಿಸಿಕೊಳ್ಳಬೇಕು.

ಬಾದಾಮಿ : ಕ್ಯಾಲ್ಸಿಯಂ ಹಾಗೂ ಪ್ರೊಟೀನ್ ಅತ್ಯಧಿಕವಾಗಿರೋ ಇದು ಹಲ್ಲಿನ ಆರೋಗ್ಯಕ್ಕೆ ಪೂರಕ.

ಸೇಬು : ಸ್ಕ್ರಬ್ ರೀತಿಯಲ್ಲಿ ಕಾರ್ಯ ನಿರ್ವಹಿಸುವ ಇದು, ಹಲ್ಲನ್ನು ಸ್ವಚ್ಛಗೊಳಿಸಿ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸುತ್ತದೆ.

ಸೊಪ್ಪುಗಳು : ಪೊಲಿಕ್ ಆಸಿಡ್, ವಿಟಮಿನ್ ಬಿ ಅಂಶವು ದಂತ ಪಂಕ್ತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ.

ಸ್ಟ್ರಾಬೆರಿ : ಇದು ಹಲ್ಲಿನ ಬಿಳುಪನ್ನು ಕಾಪಾಡುತ್ತದೆ. ಇದೊಂದು ನೈಸರ್ಗಿಕ ಹಲ್ಲು ಉಜ್ಜುವ ಪೇಸ್ಟ್ ನಂತೆ ಕಾರ್ಯ ನಿರ್ವಹಿಸುತ್ತದೆ. ಬೇಕಿಂಗ್ ಸೋಡಾದೊಂದಿಗೆ ಸೇರಿಸಿಕೊಂಡು ಹಲ್ಲುಜ್ಜಬಹುದು.

ಕಲ್ಲಂಗಡಿ : ವಿಟಮಿನ್ ಸಿ ಅಂಶವಿರುವ ಇದು ದಂತದ ಆರೋಗ್ಯಕ್ಕೆ ಸಹಾಯಕ.

ಬಟರ್ ಫ್ರೂಟ್ : ಇದರಲ್ಲಿರೋ ವಿಟಮಿನ್ ಸಿ, ಪೊಟ್ಯಾಷಿಯಂ ಹಲ್ಲಿನ ಆರೋಗ್ಯಕ್ಕೆ ಉತ್ತಮ. ಆದ್ದರಿಂದ ಸಾಧ್ಯವಾದಷ್ಟು ಇದರ ಜ್ಯೂಸ್ ಸೇವಿಸಿ.

ಕ್ಯಾರಟ್ : ಊಟದ ನಂತರ ಹಸಿ ಕ್ಯಾರೆಟ್ ಸೇವನೆಯಿಂದ ಬಾಯಲ್ಲಿ ಲಾಲಾರಸ ಉತ್ಪಾದನೆ ಹೆಚ್ಚುತ್ತದೆ. ಇದು ಹಲ್ಲು ಹುಳುಕಾಗುವ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...