ಕೆಲವರು ಚರ್ಮವು ಸೂಕ್ಷ್ಮವಾಗಿರುವುದರಿಂದ ಬ್ಯಾಕ್ಟೀರಿಯಾ, ವೈರಸ್ ಗಳು ದಾಳಿ ಮಾಡಿದ ತಕ್ಷಣ ಹಾನಿಗೊಳಗಾಗುತ್ತವೆ. ಇದರಿಂದ ಚರ್ಮದಲ್ಲಿ ಅಲರ್ಜಿ, ತುರಿಕೆ, ನೋವು ಉಂಟಾಗುತ್ತದೆ. ಹಾಗಾಗಿ ಈ ಚರ್ಮದ ಸಮಸ್ಯೆಯನ್ನು ನಿವಾರಿಸಲು ಈ ಆಹಾರವನ್ನು ಸೇವಿಸಿ.
ಎಲೆಕೋಸು :ಇದರಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು, ಇದು ಚರ್ಮವನ್ನು ಸೊಂಕುಗಳಿಂದ ಕಾಪಾಡುತ್ತದೆ, ಹಾಗಾಗಿ ಇದನ್ನು ಚರ್ಮದ ಸಮಸ್ಯೆ ಇರುವವರು ಹೆಚ್ಚಾಗಿ ಸೇವಿಸಿ.
ತೆಂಗಿನೆಣ್ಣೆ : ಇದು ಶಿಲೀಂಧ್ರ ಸೋಂಕಿಗೆ ಪರಿಣಾಮಕಾರಿ ಮನೆಮದ್ದು. ಇದು ಚರ್ಮವನ್ನು ಸೂಕ್ಷ್ಮಾಣು ಜೀವಿಗಳಿಂದ ಕಾಪಾಡುತ್ತದೆ.
ಅರಶಿನ : ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್, ಆಂಟಿ ವೈರಸ್, ಉರಿಯೂತದ ಗುಣಗಳಿವೆ. ಇದನ್ನು ಸೂಕ್ಷ್ಮ ಚರ್ಮದವರು ಹೆಚ್ಚಾಗಿ ಬಳಸಿದರೆ ಉತ್ತಮ.
ಜೇನುತುಪ್ಪ: ಇದು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತದೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ. ಹಾಗಾಗಿ ಇದನ್ನು ಸೇವಿಸುವುದರಿಂದ ಚರ್ಮದ ಸೋಂಕು ಕಡಿಮೆಯಾಗುತ್ತದೆ.
ಬೆಳ್ಳುಳ್ಳಿ : ಇದು ಆ್ಯಂಟಿ ಫಂಗಸ್, ಆಂಟಿ ವೈರಲ್, ನಂಜು ನಿವಾರಕ ಗುಣಗಳನ್ನು ಹೊಂದಿದೆ. ಇದನ್ನು ಸೇವಿಸಿದರೆ ದೇಹದಲ್ಲಿರುವ ಹಾನಿಕಾರಕ ಸೂಕ್ಷ್ಮಾಣು ಜೀವಿಗಳು ನಾಶವಾಗುತ್ತವೆ.