alex Certify ಸ್ನಾಯು ನೋವು ನಿವಾರಣೆಗೆ ಪ್ರತಿ ದಿನ ಈ ಆಹಾರ ಸೇವಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ನಾಯು ನೋವು ನಿವಾರಣೆಗೆ ಪ್ರತಿ ದಿನ ಈ ಆಹಾರ ಸೇವಿಸಿ

News18 Kannada - ಮೈ-ಕೈ ನೋವು ಹೋಗಲಾಡಿಸಲು ಸುಲಭವಾದ ಪರಿಹಾರಗಳಿವು! | Effective home remedies to treat body pain - Karnataka Kannada News, Today's Latest News in Kannada

ಸ್ನಾಯು ನೋವು, ಆಯಾಸ, ಮುಂತಾದ ಲಕ್ಷಣಗಳು ಜೀವಸತ್ವಗಳು ಮತ್ತು ಖನಿಜಗಳ ಕೊರತೆಯನ್ನು ಸೂಚಿಸುತ್ತದೆ. ಇದರಿಂದ ನಮ್ಮ ದೇಹ ದುರ್ಬಲ ಮತ್ತು ನಿರ್ಜೀವವಾಗುತ್ತದೆ. ಹಾಗಾಗಿ ಇದಕ್ಕೆ ಸರಿಯಾದ ಪರಿಹಾರ ಕಂಡುಕೊಳ್ಳಬೇಕು. ಅದಕ್ಕಾಗಿ ಈ ಆಹಾರಗಳನ್ನು ಸೇವಿಸಿ.

*ಕ್ಯಾಲ್ಸಿಯಂ : ಇದು ಮೂಳೆಗಳು ಮತ್ತು ಹಲ್ಲುಗಳನ್ನು ಆರೋಗ್ಯವಾಗಿಡುತ್ತದೆ. ಕ್ಯಾಲ್ಸಿಯಂ ಕೊರತೆಯಿಂದ ಆಯಾಸ, ಸ್ನಾಯು ನೋವು, ಮುಂತಾದ ಸಮಸ್ಯೆ ಕಾಡುತ್ತದೆ. ಹಾಗಾಗಿ ಬಾದಾಮಿ, ಅನಾನಸ್, ಸೀತಾಫಲ ಮುಂತಾದ ಹಣ್ಣುಗಳನ್ನು ಸೇವಿಸಿ.

*ಪೊಟ್ಯಾಶಿಯಂ : ಇದರ ಕೊರತೆಯಿಂದ ತೂಕನಷ್ಟ, ಸ್ನಾಯು ದೌರ್ಬಲ್ಯ, ಮಲಬದ್ಧತೆ, ಹೊಟ್ಟೆ ನೋವಿಗೆ ಕಾರಣವಾಗಬಹುದು. ಹಾಗಾಗಿ ಬಾಳೆಹಣ್ಣು, ಧಾನ್ಯಗಳು, ಎಳನೀರು, ಪಾಲಕ್, ಬೀನ್ಸ್ ಸೇವಿಸಿ.

*ವಿಟಮಿನ್ ಡಿ : ಇದರ ಕೊರತೆಯಿಂದ ಮೂಳೆಗಳು ಮೃದುವಾಗುತ್ತದೆ. ಇದನ್ನು ನಿವಾರಿಸಲು ಮೊಟ್ಟೆ ಅಥವಾ ಅಣಬೆಗಳನ್ನು ವಾರಕ್ಕೆ 2 ಬಾರಿಯಾದರೂ ಸೇವಿಸಬೇಕು.

*ಕಬ್ಬಿಣಾಂಶ : ಇದು ದೇಹಕ್ಕೆ ಆಮ್ಲಜನಕವನ್ನು ಸಾಗಿಸುತ್ತದೆ. ಕಬ್ಬಿಣಾಂಶದ ಕೊರತೆಯಿಂದ ರಕ್ತಹೀನತೆ ಸಮಸ್ಯೆ ಕಾಡುತ್ತದೆ. ಪಾಲಕ್, ಕೋಳಿ. ಒಣದ್ರಾಕ್ಷಿ ಮುಂತಾದವುಗಳನ್ನು ಸೇವಿಸಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...