ಇತ್ತೀಚಿನ ದಿನಗಳಲ್ಲಿ ಜನರು ಬ್ಯುಸಿ ಸಮಯದಿಂದ ತಮ್ಮ ಆರೋಗ್ಯದ ಬಗ್ಗೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಇದರಿಂದ ಅವರು ಬೊಜ್ಜಿನ ಸಮಸ್ಯೆಗೂ ಬಲಿಯಾಗುತ್ತಿದ್ದಾರೆ. ಹಾಗಾಗಿ ಈ ಬೊಜ್ಜನ್ನು ಕರಗಿಸಿಕೊಳ್ಳಲು ತಿಂಗಳಿನಲ್ಲಿ ಒಂದು ವಾರಗಳ ಕಾಲ ಈ ಆಹಾರ ಸೇವಿಸಿ ಬೊಜ್ಜನ್ನು ಕರಗಿಸಿಕೊಳ್ಳಿ.
ನೀವು ಒಂದು ವಾರದಲ್ಲಿ ಬೆಳಿಗ್ಗೆ ಎದ್ದ ನಂತರ ತಪ್ಪದೇ 3-4 ಗ್ಲಾಸ್ ನೀರನ್ನು ಕುಡಿಯಿರಿ. ಹಾಗೇ ಬೆಳಿಗ್ಗೆ 11 ಗಂಟೆಗೆ ಉಪಹಾರವನ್ನು ಸೇವಿಸಬೇಕು. ಈ ಉಪಹಾರದಲ್ಲಿ ಬೇಳೆಕಾಳುಗಳು, ರೊಟ್ಟಿ, ತರಕಾರಿಗಳು, ಸಲಾಡ್, ಮೊಸರು, ಮೀನು, ಚಿಕನ್, ಮೊಟ್ಟೆಗಳನ್ನು ಸೇವಿಸಬಹುದು.
ಸಂಜೆ 4-5 ರ ನಡುವೆ ನೀವು ಲಘು ಉಪಹಾರವನ್ನು ಸೇವಿಸಿ. ಇದರಲ್ಲಿ ನೀವು ಸ್ಯಾಂಡ್ ವಿಚ್, ಚೀಸ್ , ಕಡಲೆ, ರಾಜ್ಮಾ ಸಲಾಡ್ ಅನ್ನು ತಿನ್ನಬಹುದು.
ಹಾಗೇ ರಾತ್ರಿಯ ಊಟ ಲಘುವಾಗಿರಲಿ. ಅದನ್ನು 7 ಗಂಟೆಯೊಳಗೆ ಸೇವಿಸಿ. ಈ ವೇಳೆ ನೀವು ಗಂಜಿ, ಖಿಚಡಿ, ಓಟ್ಸ್ ಮತ್ತು ಸೂಪ್ ಕುಡಿಯಿರಿ.
ಮಲಗುವ 3 ಗಂಟೆಗಳ ಮೊದಲು ಆಹಾರವನ್ನು ಸೇವಿಸಿ ಮತ್ತು ಪ್ರತಿದಿನ ಕನಿಷ್ಠ 45 ನಿಮಿಷಗಳ ಕಾಲ ವ್ಯಾಯಾಮ ಮಾಡಿ.
ಒಂದು ತಿಂಗಳಿನಲ್ಲಿ ಒಂದು ವಾರ ಈ ಕ್ರಮ ಪಾಲಿಸಿದರೆ ನೀವು ತೂಕ ಕಡಿಮೆ ಮಾಡಿಕೊಂಡು ಫಿಟ್ ಆಗುವುದು ಖಂಡಿತ.