ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣಿಗೆ ಇನ್ನಿಲ್ಲದ ಬೇಡಿಕೆ ಬರುತ್ತದೆ. ದೇಹದ ನಿರ್ಜಲೀಕರಣ ಸಮಸ್ಯೆಯನ್ನು ಇದು ಕಡಿಮೆ ಮಾಡುತ್ತೆ. ಸಾಮಾನ್ಯವಾಗಿ ಜನರು ಕಲ್ಲಂಗಡಿ ಹಣ್ಣಿನ ಒಳ ಭಾಗವನ್ನು ತಿಂದು ಸಿಪ್ಪೆ ಎಸೆಯುತ್ತಾರೆ. ಆದ್ರೆ ಸಿಪ್ಪೆಯೆಂದು ನಾವು ಎಸೆಯುವ ಬಿಳಿ ಭಾಗದಲ್ಲಿ ಸಾಕಷ್ಟು ಪೋಷಕಾಂಶಗಳಿರುತ್ತವೆ.
ಬಿಳಿ ಭಾಗದಲ್ಲಿರುವ ಪೋಷಕಾಂಶ ಹೃದಯವನ್ನು ಕಾಪಾಡುತ್ತದೆ. ಇದ್ರಲ್ಲಿರುವ Citrulline ರಕ್ತದ ಹರಿವು, ಹೃದಯ ವೈಫಲ್ಯ ಸಮಸ್ಯೆಗೆ ಮುಕ್ತಿ ನೀಡುತ್ತದೆ. ಮಧುಮೇಹಕ್ಕೂ ಇದು ಒಳ್ಳೆಯದು.
ಕಲ್ಲಂಗಡಿ ಸಿಪ್ಪೆಯಲ್ಲಿ ಪೊಟ್ಯಾಸಿಯಮ್ ಇದ್ದು, ಇದು ಮೂತ್ರಪಿಂಡವನ್ನು ಆರೋಗ್ಯವಾಗಿಡಲು ಪ್ರಯೋಜನಕಾರಿಯಾಗಿದೆ. ಪ್ರತಿ ದಿನ ಒಂದು ಲೋಟ ತಾಜಾ ಕಲ್ಲಂಗಡಿ ಹಣ್ಣಿನ ಜ್ಯೂಸ್ ಸೇವನೆಯಿಂದ ಸಾಕಷ್ಟು ಪ್ರಯೋಜನವಿದೆ.
ಕಲ್ಲಂಗಡಿ ಸಿಪ್ಪೆಯಲ್ಲಿ ಲೈಕೋಪೀನ್ ಉರಿಯೂತವನ್ನು ಕಡಿಮೆ ಮಾಡುತ್ತದೆ. ಚರ್ಮದ ಉರಿಯೂತ, ಸಂಧಿವಾತದ ಸಮಸ್ಯೆಗೆ ಒಳ್ಳೆಯ ಮದ್ದು. ಮೊಡವೆ ಸಮಸ್ಯೆಯನ್ನೂ ಕಡಿಮೆ ಮಾಡುತ್ತದೆ.
ಇದು ತೂಕ ಇಳಿಸಿಕೊಳ್ಳಲು ನೆರವಾಗುತ್ತದೆ. ಹೊಟ್ಟೆ ತುಂಬಿರುವ ಅನುಭವ ನೀಡುತ್ತದೆ. ಬಿಪಿಯನ್ನು ನಿಯಂತ್ರಣದಲ್ಲಿಡುತ್ತದೆ. ಇದ್ರಲ್ಲಿರುವ ಮೆಗ್ನೀಸಿಯಮ್ ನಿದ್ರೆ ಸಮಸ್ಯೆಯನ್ನು ದೂರ ಮಾಡುತ್ತದೆ.