
ಕೆಲವರು ಅತಿಯಾಗಿ ಆಲ್ಕೋಹಾಲ್ ಸೇವಿಸುತ್ತಾರೆ. ಆದರೆ ಇದು ದೇಹಕ್ಕೆ ತುಂಬಾ ಹಾನಿಕಾರಕ. ಇನ್ನೂ ಕೆಲವರಿಗೆ ಆಲ್ಕೋಹಾಲ್ ಸೇವನೆನಿಂದ ಆರೋಗ್ಯ ಹಾಳಾಗುತ್ತದೆ ಎಂದು ತಿಳಿದರೂ ಅದನ್ನು ಬಿಡಲು ಆಗುವುದಿಲ್ಲ. ಅಂತವರು ಈ ಹಣ್ಣುಗಳನ್ನು ಸೇವಿಸಿದರೆ ಈ ಆಲ್ಕೋಹಾಲ್ ಸೇವನೆಯಿಂದ ಮುಕ್ತರಾಗಬಹುದು.
*ಸೇಬು : ಸೇಬು ಹಣ್ಣಿನಿಂದ ವಿವಿಧ ಚಟಗಳಿಗೆ ಚಿಕಿತ್ಸೆ ನೀಡಬಹುದು. ಇದು ದೇಹದಲ್ಲಿರುವ ವಿಷವನ್ನು ಹೊರಹಾಕುತ್ತದೆ. ಇದನ್ನು ನಿಯಮತವಾಗಿ ಸೇವಿಸುತ್ತಾ ಬಂದರೆ ಆಲ್ಕೋಹಾಲ್ ಕುಡಿಯಬೇಕೆಂಬ ಬಯಕೆಯನ್ನು ನಿಯಂತ್ರಿಸಬಹುದು.
*ದ್ರಾಕ್ಷಿ ಹಣ್ಣು : ಕೆಲವು ಆಲ್ಕೋಹಾಲ್ ಗಳಿಗೆ ಇದನ್ನು ಬಳಸುತ್ತಾರೆ. ಹಾಗಾಗಿ ದ್ರಾಕ್ಷಿ ಹಣ್ಣಿನ ರಸ ಸೇವಿಸಿದರೆ ಆಲ್ಕೋಹಾಲ್ ಸೇವಿಸಬೇಕೆಂಬ ಹಂಬಲ ದೂರವಾಗುತ್ತದೆ.
*ಹಾಗಲಕಾಯಿ : ಇದು ಆಲ್ಕೋಹಾಲ್ ನಿಂದ ಲಿವರ್ ಹಾನಿಗೊಳಗಾಗುವುದನ್ನು ತಡೆಯುತ್ತದೆ. ಮತ್ತು ಆಲ್ಕೋಹಾಲ್ ಸೇವಿಸುವ ಹಂಬಲವನ್ನು ದೂರವಾಗಿಸುತ್ತದೆ. ಹಾಗಾಗಿ ಇದನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿಯಮಿತವಾಗಿ ಸೇವಿಸಿ.