ದೇಹ ಸರಿಯಾಗಿ ಕಾರ್ಯ ನಿರ್ವಹಿಸಲು ಅನೇಕ ಪೋಷಕಾಂಶಗಳು ಬೇಕಾಗುತ್ತದೆ. ಅದರಲ್ಲಿ ಸೆಲೆನಿಯಂ ಕೂಡ ಒಂದು. ಇದು ದೇಹವನ್ನು ಕ್ಯಾನ್ಸರ್, ಸೋಂಕು ಮತ್ತು ಫ್ರೀ ರಾಡಿಕಲ್ಸ್ ಗಳಿಂದ ರಕ್ಷಿಸುತ್ತದೆ. ಇದು ಡಿಎನ್ ಎಯನ್ನು ಸರಿಪಡಿಸುತ್ತದೆ. ಹಾಗಾಗಿ ಸೆಲೆನಿಯಂ ಸಮೃದ್ಧವಾಗಿರುವ ಆಹಾರಗಳ ಬಗ್ಗೆ ತಿಳಿದುಕೊಳ್ಳಿ.
ಚಿಕನ್ : ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸೆಲೆನಿಯಂ ಕಂಡುಬರುತ್ತದೆ. ಹಾಗಾಗಿ ನಿಮ್ಮ ಅಡುಗೆಯಲ್ಲಿ ಚಿಕನ್ ಅನ್ನು ಸೇರಿಸಿಕೊಳ್ಳಿ. ಇದು ದೈನಂದಿನ ಅಗತ್ಯವನ್ನು ಪೂರೈಸಲು ಸಹಾಯ ಮಾಡುತ್ತದೆ.
ಮೊಟ್ಟೆ : ಮೊಟ್ಟೆಗಳನ್ನು ಸೇವಿಸುವುದರಿಂದ ಕೂಡ ದೇಹಕ್ಕೆ ಸೆಲೆನಿಯಂ ಸಿಗುತ್ತದೆ. ಹಾಗಾಗಿ ದಿನಕ್ಕೆ 2 ಮೊಟ್ಟೆಗಳನ್ನು ಸೇವಿಸಿ.
ಚೀಸ್ : ಇದರಲ್ಲಿ ಸೆಲೆನಿಯಂ ಸಮೃದ್ಧವಾಗಿದೆ. ಇದು ನಿಮ್ಮನ್ನು ಹೃದಯ ಸಂಬಂಧಿ ಕಾಯಿಲೆಗಳಿಂದ ಕಾಪಾಡುತ್ತದೆ. ಇದನ್ನು ಸೇವಿಸುವುದರಿಂದ ಕೂಡ ಸೆಲೆನಿಯಂ ಕೊರತೆಯನ್ನು ತಪ್ಪಿಸಬಹುದು.
ಸೊಪ್ಪು : ಹಸಿರು ಸೊಪ್ಪುಗಳನ್ನು ತಿನ್ನುವ ಮೂಲಕ ದೇಹದಲ್ಲಿ ಸೆಲೆನಿಯಂ ಅಗತ್ಯವನ್ನು ಪೂರೈಸಬಹುದು. ಹಸಿರು ಸೊಪ್ಪಿನಲ್ಲಿ ಸೆಲೆನಿಯಂ ಪ್ರಮಾಣ ಹೆಚ್ಚಾಗಿರುತ್ತದೆ. ಹಾಗಾಗಿ ನಿಮ್ಮ ಆಹಾರದಲ್ಲಿ ಪ್ರತಿದಿನ ಹಸಿರು ಸೊಪ್ಪನ್ನು ಸೇರಿಸಿಕೊಳ್ಳಿ.
ಒಟ್ಟಾರೆ ನಿಮ್ಮ ದೇಹ ಆರೋಗ್ಯವಾಗಿರಲು ಸೆಲೆನಿಯಂನ ಕೊರತೆಯನ್ನು ನೀಗಿಸಿಕೊಳ್ಳಿ. ಅದಕ್ಕಾಗಿ ತಪ್ಪದೇ ಈ ಆಹಾರಗಳನ್ನು ಸೇವಿಸಿ.